ಸಮುದಾಯ ಬಾನುಲಿಗಳು ಗ್ರಾಮೀಣ ಭಾಗದಲ್ಲಿ ಕೊರೊನಾ ಆತಂಕ ದೂರ ಮಾಡಿವೆ : ಡಾ.ಎಂ.ಎಸ್.ಸಪ್ನಾ

ಮೈಸೂರು,ಡಿಸೆಂಬರ್,10,2020(www.justkannada.in) : ಸಮುದಾಯ ಬಾನುಲಿಗಳು ಕೊರೊನಾ ಬಗೆಗೆ ಗ್ರಾಮೀಣ ಜನರಲ್ಲಿದ್ದ ಆತಂಕ ದೂರ ಮಾಡಿ, ಜನರ ಭಾಷೆಯಲ್ಲೇ ತಿಳಿವಳಿಕೆ ಮೂಡಿಸುತ್ತಾ ಮನಃಪರಿವರ್ತನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಮೈಸೂರು ವಿವಿ ಸಿಆರ್ ಎಸ್ ಸಹ ಸಂಯೋಜಕರಾದ ಡಾ.ಎಂ.ಎಸ್.ಸಪ್ನಾ ಅಭಿಪ್ರಾಯಪಟ್ಟರು.logo-justkannada-mysoreಮೈಸೂರು ವಿವಿ ಸಮುದಾಯ ರೇಡಿಯೋ ಕೇಂದ್ರದ ವತಿಯಿಂದ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 ಸಮಯದಲ್ಲಿ ಸಮುದಾಯ ರೇಡಿಯೋದ ಪಾತ್ರ ಕುರಿತ ವೆಬಿನಾರ್ ನಲ್ಲಿ ಅವರು ಮಾತನಾಡಿದರು.

ಕೊರೊನಾ ವ್ಯಾಪಿಸಿದ ಆರಂಭದಲ್ಲಿ ಪತ್ರಿಕೆಗಳು ಹಾಗೂ ಸುದ್ದಿ ಮಾಧ್ಯಮಗಳು ನಗರ ಚಿತ್ರಣವನ್ನೇ ಬಿತ್ತರಿಸುತ್ತಿದ್ದರಿಂದ ಗ್ರಾಮೀಣ ಜನರು ಹೆಚ್ಚು ಆತಂಕಗೊಂಡಿದ್ದರು.

Community-Banuli-Corona-anxiety-rural-area-shifted-away-Dr.M.S.Sapnaಕ್ವಾರಂಟೈನ್, ವ್ಯಾಕ್ಸಿನ್, ಸ್ಯಾನಿಟೈಸರ್ ಎಂದರೇನು ಎಂಬುದೇ ತಿಳಿದಿರಲಿಲ್ಲ. ನೆರೆ ಹೊರೆಯವರನ್ನೂ ಮುಟ್ಟಿಸಿಕೊಳ್ಳಲು ಹೆದರುತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರ ಭಾಷೆಯಲ್ಲೇ ತಿಳಿವಳಿಕೆ ಮೂಡಿಸಿದ್ದು, ಸಮುದಾಯ ಬಾನುಲಿಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಜನರು ಗ್ರಾಮೀಣರು ಹಾಗೂ ಆದಿವಾಸಿ ಜನಗಳ ಅಭಿವೃದ್ಧಿಗೆ ಮಾತ್ರವೇ ಸಮುದಾಯ ಬಾನುಲಿಗಳು ಅಂದುಕೊಂಡಿದ್ದಾರೆ. ಸಮುದಾಯ ಬಾನುಲಿಯ ಪ್ರಾಮುಖ್ಯತೆಯೇ ತಿಳಿಯುತ್ತಿಲ್ಲ. ಇದು ತಪ್ಪು ಪರಿಕಲ್ಪನೆ ಎಂದರು.

Community-Banuli-Corona-anxiety-rural-area-shifted-away-Dr.M.S.Sapnaನಗರ ಪ್ರದೇಶದ ಮಕ್ಕಳು, ಪ್ರತಿಭಾನ್ವಿತರು ಸಮುದಾಯ ಬಾನುಲಿ ಕಾರ್ಯಕ್ರಮಗಳ ಭಾಗವಹಿಸಬಹುದಾಗಿದೆ. ಸಮುದಾಯದ ಅಭಿವೃದ್ಧಿಯೇ ಇದರ ಮೂಲ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು. ಹೈದರಾಬಾದ್ ವಿವಿ ಸಮುದಾಯ ರೇಡಿಯೋ ಮುಖ್ಯಸ್ಥರಾದ ಪ್ರೊ.ಕಾಂಚನ ಮಲ್ಲಿಕ್, ಕುಲಪತಿ ವಿಶೇಷಾಧಿಕಾರಿ ಡಾ.ಚೇತನ್, ಪ್ರೊ.ನಿರಂಜನ್ ವಾನಳ್ಳಿ, ರಾಕೇಶ್ ಇತರರು ಇದ್ದರು.

key words : Community-Banuli-Corona-anxiety-rural-area-shifted-away-Dr.M.S.Sapna