ಲೆಕ್ಕಪತ್ರ ಸಮಿತಿ ಭೇಟಿಗೆ ಅವಕಾಶ ನೀಡಿಲ್ಲ: ಸ್ಪೀಕರ್ ವಿರುದ್ದವೇ ಹಕ್ಕುಚ್ಯುತಿ ಮಂಡನೆಗೆ ನಿರ್ಧಾರ- ಹೆಚ್.ಕೆ.ಪಾಟೀಲ್…

ಬೆಂಗಳೂರು,ಮೇ,30,2020(www.justkannada.in):  ಲೆಕ್ಕಪತ್ರ ಸಮಿತಿ ಭೇಟಿಗೆ ಅವಕಾಶ ನೀಡಿಲ್ಲ. ನಮ್ಮ ಸಮಿತಿ ಭೇಟಿಗೆ ನಿಲುಗಡೆ ಮಾಡಲಾಗಿದೆ. ಸ್ಪೀಕರ್ ನೋಟೀಸ್  ಹೊರಡಿಸುವ ಮೂಲಕ ಶಾಸನ ಸಭೆಯ ಕರ್ತವ್ಯಕ್ಕೆ ಧಕ್ಕೆ ಮಾಡಿದ್ದಾರೆ. ಇದು ನಮ್ಮ ಕರ್ತವ್ಯಕ್ಕೆ ಚ್ಯುತಿ ಮಾಡುವ ಪ್ರಯತ್ನವಾಗಿದೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಕಿಡಿಕಾರಿದರು.

ವಿಧಾನಸೌಧದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್, ನಮ್ಮ ಕರ್ತವ್ಯ ನಿಬಾವಣೆ ಹಕ್ಕಿಗೆ ಚ್ಯುತಿಯಾಗಿದೆ. ನಮ್ಮ‌ಸ್ವತಂತ್ರ್ಯಕ್ಕೆ ಅಡ್ಡಿಯಾಗ್ತಿದೆ. ಸ್ಪೀಕರ್ ಅವರ ನೋಟೀಸ್ ಹಕ್ಕುಚ್ಯುತಿಗೆ ಧಕ್ಕೆ ತಂದಿದೆ. ಹಕ್ಕು ಚ್ಯುತಿ ದೂರನ್ನ ನಾವು ಸಲ್ಲಿಸಬೇಕೇ,ಬೇಡ್ವೇ ಎಂಬ ಪ್ರಶ್ನೆಯಿದೆ. ನಾವು ಮಂಗಳವಾರ ಮತ್ತೆ ಭೇಟಿ ಮಾಡ್ತೇವೆ. ಮಂಗಳವಾರ ಸ್ಪೀಕರ್ ವಿರುದ್ಧವೇ ಹಕ್ಕುಚ್ಯುತಿ ಮಂಡನೆಗೆ ನಿರ್ಧಾರ ಮಾಡಿತ್ತೇವೆ ಎಂದು ತಿಳಿಸಿದರು.

ಪಿಪಿಎ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲವೆಂಬ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್, ಇದರ ಬಗ್ಗೆ ಅವ್ಯವಹಾರದ ದೂರು ಬಂದಿತ್ತು. ಇದನ್ನ ಪರಿಶೀಲನೆ ಮಾಡೋಕೆ ನಾವು ಹೊರಟಿದ್ದು. ಇಲ್ಲಿ ಕಾಂಗ್ರೆಸ್ ನವರು ಪರಿಶೀಲನೆಗೆ ಹೊರಟಿರಲಿಲ್ಲ. ಪರಿಶೀಲನೆಗೆ ನಮ್ಮ ಸಮಿತಿ ಮುಂದಾಗಿತ್ತು. ಸದನ ಸಮಿತಿ ಕಾರ್ಯಭಾರಕ್ಕೆ ಇಲ್ಲಿಯವರೆಗೆ ಅಡ್ಡಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅಡ್ಡಿಯಾಗಿದೆ ಎಂದು ಸ್ಪೀಕರ್ ನೋಟೀಸ್ ಗೆ ಅಕ್ಷೇಪ ವ್ಯಕ್ತಪಡಿಸಿದರು. committee –visit-issue -against – speaker-former Minister HK Patil.

ಶ್ರೀರಾಮುಲುಗೆ ನಾನು ಇಷ್ಟೇ ಹೇಳೋದು. ನೀವು ವರದಿಯನ್ನ ಸಮಿತಿ ಮುಂದೆ ಒದಗಿಸಿ. ನಂತರ ಅದನ್ನ ಸಮಿತಿ ಪರಾಮರ್ಶಿಸುತ್ತದೆ. ವೆಂಟಿಲೇಟರ್ ಖರೀದಿಗೆ ಹಣ ಕೊಟ್ಟಿದ್ದಾರೋ ಇಲ್ವೋ. 500 ಎಂ.ಎಲ್ ಸ್ಯಾನಿಟೈಸರ್ ಗೆ 90 ರೂಗೆ ಟೆಂಡರ್ ಕರೆಯುತ್ತಾರೆ. ಇದೇ ಟೆಂಡರ್ ಅನ್ನ ಕ್ಯಾನ್ಸಲ್ ಮಾಡ್ತಾರೆ. ಅದೇ ಪ್ರಾಡಕ್ಟ್ ಅನ್ನ 250 ರೂಗೆ ಖರೀದಿ ಮಾಡ್ತಾರೆ

ಇಲ್ಲಿ ಆಗಿರೋದು ಏನು, ಅವ್ಯವಹಾರ ಅಲ್ವಾ. ಇದರ ಬಗ್ಗೆ ಸಮಿತಿ ಲೆಕ್ಕ ಕೇಳಬೇಕಲ್ವಾ ಎಂದು ಹೆಚ್.ಕೆ ಪಾಟೀಲ್ ಪ್ರಶ್ನಿಸಿದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕಾಂಗ್ರೆಸ್ ಪಾರ್ಟಿಯಲ್ಲ. ಇದರಲ್ಲಿ ಎಲ್ಲಾ ಪಕ್ಷದ ಸದಸ್ಯರು ಇರ್ತಾರೆ. ಇದು ಶ್ರೀ ರಾಮುಲು ಅವರಿಗೆ ಗೊತ್ತಿಲ್ವ. ವೆಂಟಿಲೇಟರ್ ಎಷ್ಡು ಹಣಕ್ಕೆ ಖರೀದಿ ಮಾಡಿದ್ದೀರಾ. ಮಾಸ್ಕ್, ಸ್ಯಾನಿಟೈಸರ್ ಎಷ್ಟಕ್ಕೆ ಖರೀದಿ ಮಾಡಿದ್ದೀರಿ. ಇದರ ಬಗ್ಗೆ ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಿ ಎಂದು ಹೆಚ್.ಕೆ ಪಾಟೀಲ್ ಆಗ್ರಹಿಸಿದರು.

Key words:  committee –visit-issue -against – speaker-former Minister HK Patil.