“ಕಮಿಷನ್ ಆಸೆಗೆ ಕನ್ನಡಿಗರ ಬದುಕಿಗೆ ಬರೆ ಎಳೆಯಬೇಡಿ” : ವಾಟಾಳ್ ನಾಗರಾಜ್

ಬೆಂಗಳೂರು,ಫೆಬ್ರವರಿ,08,2021(www.justkannada.in) : ಕೇವಲ ಕಮಿಷನ್ ಆಸೆಗಾಗಿ ಅನ್ಯ ರಾಜ್ಯಗಳ ಆಂಬ್ಯುಲೆನ್ಸ್ ಸೇವೆ ಪಡೆದು ಕನ್ನಡಿಗರ ಬದುಕಿಗೆ ಬರೆ ಎಳೆಯಬೇಡಿ. 15 ದಿನಗಳ ಕಾಲ ಗಡುವು ನೀಡುತ್ತೇವೆ. ಅಷ್ಟರೊಳಗೆ ಬೇರೆ ರಾಜ್ಯದ ಆಂಬ್ಯುಲೆನ್ಸ್‍ಗಳ ಸೇವೆ ತೆರವಾಗಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶವ್ಯಕ್ತಪಡಿಸಿದ್ದಾರೆ.jkರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆಂಬ ಬೇಧವಿಲ್ಲದೆ ಸಾರ್ವತ್ರಿಕವಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಾ ಬಂದಿರುವ ನಮ್ಮ ರಾಜ್ಯದವರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಸರ್ಕಾರದೊಂದಿಗೆ ಕೈ ಜೋಡಿಸಿ ಪ್ರಾಮಾಣಿಕವಾಗಿ ಆಂಬ್ಯುಲೆನ್ಸ್‍ನವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಆದರೆ, ಸ್ಟನ್ ಪ್ಲಸ್ ರೆಡ್ ಅಂಬ್ಯುಲೆನ್ಸ್ ಎಂಬ ಕಂಪನಿಯವರು ಈಗ ಸಾವಿರಾರು ಅಂಬ್ಯುಲೆನ್ಸ್‍ಗಳನ್ನು ರಾಜ್ಯದಲ್ಲಿ ಓಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ನಮ್ಮ ರಾಜ್ಯದ ಕನ್ನಡಿಗರ ಆಯಂಬ್ಯುಲೆನ್ಸ್‍ನವರ ಬದುಕು ಬರ್ಬಾದಾಗುತ್ತದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಶಶಿಕಲಾ ಅದ್ಧೂರಿ ಮೆರವಣಿಗೆ ಸಂವಿಧಾನಕ್ಕೆ ಮಾಡಿದ ಅಪಚಾರCommission-desire-Kannadigara-life-Don't-ruin-Vatal Nagaraj

ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಶಶಿಕಲಾ ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಕರೆದೊಯ್ಯುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ. ಅವರೇನು ಸ್ವಾತಂತ್ರ್ಯ ಹೋರಾಟ ಮಾಡಿ, ಚಳುವಳಿ ಮಾಡಿ ಜೈಲಿಗೆ ಹೋದವರಲ್ಲ. ತಪ್ಪೆಸಗಿ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದಾರೆ. ಅವರನ್ನು ಈ ರೀತಿ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿರುವುದು ತೀವ್ರ ಖಂಡನೀಯ ಎಂದರು.

key words : Commission-desire-Kannadigara-life-Don’t-ruin-Vatal Nagaraj