ಧಾರವಾಹಿಗಳ TRP ಸಮಯ: ಜೀ ಕನ್ನಡದ ‘ಜೊತೆ ಜೊತೆಯಲಿ’ ಹಿಂದಿಕ್ಕಿದ ಕಲರ್ಸ್ ಕನ್ನಡದ ‘ಮಂಗಳಗೌರಿ’

ಬೆಂಗಳೂರು, ಡಿಸೆಂಬರ್ 06, 2019 (www.justkannada.in): ಕಿರುತೆರೆಯ TRP ಸಮರದಲ್ಲಿ ಜೀ ಕನ್ನಡದ ‘ಜೊತೆ ಜೊತೆಯಲಿ’ ಧಾರಾವಾಹಿ ಹಿಂದಿಕ್ಕಿ ನಂಬರ್ 1 ಸ್ಥಾನವನ್ನು ಕಲರ್ಸ್ ಕನ್ನಡದ ಮಂಗಳಗೌರಿ ಪಡೆದಿದೆ.

ಮಂಗಳಗೌರಿ ಧಾರಾವಾಹಿಯಲ್ಲಿ ಕಳೆದ ಒಂದು ವಾರದಿಂದ ಮಂಗಳಗೌರಿಯ ಸಾವಿನ ಸಂಚಿಕೆ ನಡೆಯುತ್ತಿದೆ. ಈಕೆಯ ಪ್ರಾಣ ಉಳಿಸಿಕೊಳ್ಳಲು ಶತಾಯಗತಾಯ ಮಾಡಲಾಗುತ್ತಿದೆ .

ಹೀಗಾಗಿ ಮಂಗಳಗೌರಿ ಮದುವೆ 6829 ಪಾಯಿಂಟ್ಸ್ ಪಡೆದಿದ್ದು , ಜೊತೆ ಜೊತೆಯಲಿ ಧಾರಾವಾಹಿಗೆ 5361 ಪಾಯಿಂಟ್ಸ್ ಸಿಕ್ಕಿದೆ .