ಕಾಗ್ನಿಜೆಂಟ್‌ ಸಂಸ್ಥೆ ಕೊಡುಗೆ; ಕಂಪ್ಯೂಟರ್‌ ಗಳನ್ನು ಹೊತ್ತು ಹೊರಟ ವಾಹನಕ್ಕೆ ಹಸಿರು ನಿಶಾನೆ ತೋರಿದ ಇಲಾಖೆ ಆಯುಕ್ತ ಪ್ರದೀಪ್

ಬೆಂಗಳೂರು,ಏಪ್ರಿಲ್,8,2021(www.justkannada.in):  ಉನ್ನತ ಶಿಕ್ಷಣ ಇಲಾಖೆಯ “ಹೆಲ್ಪ್‌ ಎಜುಕೇಟ್” ಉಪಕ್ರಮದ ಅಡಿಯಲ್ಲಿ ವಿವಿಧ ಕಾಲೇಜುಗಳಿಗೆ ಡಿಬಾಂಡೆಡ್‌ ಕಂಪ್ಯೂಟರ್ʼಗಳನ್ನು ಇಲಾಖೆಯ ಉನ್ನತ ಅಧಿಕಾರಿಗಳು ಗುರುವಾರ ಕಳಿಸಿಕೊಟ್ಟರು.Illegally,Sand,carrying,Truck,Seized,arrest,driver

ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಕಂಪ್ಯೂಟರ್‌ಗಳನ್ನು ಹೊತ್ತುಹೊರಟ ವಾಹನಗಳಿಗೆ ಇಲಾಖೆಯ ಆಯುಕ್ತ ಪ್ರದೀಪ್ ಹಸಿರು ನಿಶಾನೆ ತೋರಿದರು.

ಕಾಗ್ನಿಜೆಂಟ್‌ ಸಂಸ್ಥೆ ನೀಡಿರುವ ಡಿಬಾಂಡೆಡ್‌ ಕಂಪ್ಯೂಟರ್‌ ಗಳನ್ನು ವಿವಿಧ ಕಾಲೇಜುಗಳಿಗೆ ರವಾನಿಸಲಾಯಿತಲ್ಲದೆ, ವಿವಿಧ ಹಂತಗಳಲ್ಲಿ ಒಟ್ಟು 12,500 ಡಿಬಾಂಡೆಡ್‌ ಕಂಪ್ಯೂಟರ್‌ಗಳನ್ನು ಕಳಿಸಲಾಗುತ್ತಿದೆ. ಇಂದು ರವಾನಿಸಲ್ಪಟ್ಟ ಕಂಪ್ಯೂಟರ್‌ಗಳನ್ನು ಬೆಂಗಳೂರು ವಲಯದ ಕಾಲೇಜುಗಳಿಗೆ ವಿತರಣೆ ಮಾಡಲಾಗುವುದು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಪ್ರದೀಪ್‌ ಅವರು; “ಕಾಗ್ನಿಜೆಂಟ್‌ ಸಂಸ್ಥೆ ಡಿಬಾಂಡೆಡ್‌ 12,500 ಕಂಪ್ಯೂಟರ್ʼಗಳನ್ನು ಕಾಲೇಜು ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಇದಕ್ಕೆ ಅಗತ್ಯವಾದ ಸಾಫ್ಟ್ʼವೇರ್ ಅನ್ನ ರೋಟರಿ ಕ್ಲಬ್ ಅಪ್ ಡೇಟ್ ಮಾಡಿಕೊಡುತ್ತಿದೆ. ಈ ಕಂಪ್ಯೂಟರ್ ʼಗಳನ್ನು ಸರಕಾರಿ ಪದವಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ” ಎಂದರು‌.

ಎಲ್ಲ ಸರಕಾರಿ ಪದವಿ, ಎಂಜಿನಿಯರಿಂಗ್, ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000  ಕಂಪ್ಯೂಟರ್ʼಗಳು ಬೇಕು. ಈಗ ಕಾಗ್ನಿಜೆಂಟ್ ಕಂಪನಿ 12,500 ಕಂಪ್ಯೂಟರ್ʼಗಳನ್ನು  ನೀಡುತ್ತಿದೆ. ಮತ್ತೆ 8000 ಕಂಪ್ಯೂಟರ್ʼಗಳನ್ನ ಕೊಡುವುದಾಗಿ ತಿಳಿಸಿದೆ. ಉಳಿದ 10,000 ಕಂಪ್ಯೂಟರ್‌ʼಗಳನ್ನು ಬೇರೆ ಬೇರೆ ಕಂಪನಿಗಳಿಂದ ಪಡೆಯುವ ಕೆಲಸ ಮಾಡಲಾಗುವುದು ಎಂದರು ಪ್ರದೀಪ್.

ವಿದ್ಯಾರ್ಥಿಗಳಿಗೆ ನೆರವಾಗುವ ಹಾಗೂ ಅಧ್ಯಾಪಕರಿಗೆ ತರಬೇತಿ ನೀಡುವುದು, ಕಾಲೇಜುಗಳ  ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಹೆಲ್ಪ್‌ ಎಜುಕೇಟ್‌ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ ಎಂದು ಅವರು ಮಾಹಿತಿ ನೀಡಿದರು.cognizant-agency-contribution-vehicle-computers-colleges

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮುಖ್ಯಸ್ಥ ನಾಗೇಂದ್ರ ಪ್ರಸಾದ್, ಕಾಗ್ನಿಜೆಂಟ್ ಸಂಸ್ಥೆಯ ನಿರ್ದೇಶಕ (ಸಿಎಸ್‌ಆರ್) ದೀಪಕ್ ಪ್ರಭು, ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಹರಿಸಿಂಗ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Key words: Cognizant- agency- contribution-vehicle – computers- colleges