ಆಸ್ಪತ್ರೆಯಿಂದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಡಿಸ್ಚಾರ್ಜ್: ಆತ್ಮಹತ್ಯೆ ಯತ್ನ ಕುರಿತು ಸ್ಪಷ್ಟನೆ ನೀಡಿದ್ದು ಹೀಗೆ…

ಬೆಂಗಳೂರು,ನವೆಂಬರ್,30,2020(www.justkannada.in):  ನನಗೆ ಯಾವುದೇ ರಾಜಕೀಯ ಒತ್ತಡ ಇಲ್ಲ. ಇದೊಂದು ಆಕಸ್ಮಿಕ ಅಚಾತುರ್ಯದ ಘಟನೆ. ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.logo-justkannada-mysore

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯದರ್ಶಿ ಎನ್. ಆರ್. ಸಂತೋಷ್ ಇಂದು ಎಂ.ಎಸ್ ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ, ಕಳೆದ ಮೂರು ದಿನದ ಹಿಂದೆ ನನ್ನ ಕಸಿನ್ ಬ್ರದರ್ ಮದುವೆ ಇತ್ತು. ಊಟದ ಮಾಡಿದ ಪರಿಣಾಮ ಅಜೀರ್ಣವಾಗಿತ್ತು., ಬೇರೆ ಮಾತ್ರೆ ತಗೊಂಡ ಹಿನ್ನೆಲೆಯಲ್ಲಿ ಡೋಸ್ ಹೆಚ್ಚಾಗಿತ್ತೇ ವಿನಃ ರಾಜಕೀಯ ಒತ್ತಡದಿಂದ ನಿದ್ಧೆ ಮಾತ್ರೆ ತೆಗೆದುಕೊಂಡಿರಲಿಲ್ಲ ಎಂದು ಹೇಳಿದರು.CM -Political Secretary - Santosh -Discharge – Hospital-commit -suicide -clearity

ರಾಜಕೀಯ ಒತ್ತಡ ಯಾವ ಕಾಲಕ್ಕೂ ಇರುತ್ತೆ, ಆದರೆ ಮಾತ್ರೆ ತಗೋಳ್ಳೋ ಸ್ವಭಾವ ಇಲ್ಲ. ನಿದ್ರೆ ಬರದೆ ಇದ್ದಾಗ ಮಾತ್ರೆ ತಗೊಳ್ಳುತ್ತಿದೆ. ಆದರೆ ಬೇರೆ ಮಾತ್ರೆ ತಗೊಂಡ ಪರಿಣಾಮ ಈ ರೀತಿಯಾಗಿದೆ ಎಂದು ಸಂತೋಷ್ ತಿಳಿಸಿದ್ದಾರೆ.

Key words: CM -Political Secretary – Santosh -Discharge – Hospital-commit -suicide -clearity