ಕಾರ್ಯಕ್ರಮಕ್ಕೆ ಸಿಎಂ ಕರೆ ಮಾಡಿ ಕರೆದಿದ್ದು ನಿಜ: ಆದ್ರೆ ಆಹ್ವಾನ ಪತ್ರಿಕೆಯಲ್ಲಿ ಹೆಸರಿರಲಿಲ್ಲ-  ಮಾಜಿ ಸಿಎಂ ಸಿದ್ಧರಾಮಯ್ಯ..

ಬೆಂಗಳೂರು,ನವೆಂಬರ್,12,2022(www.justkannada.in):  ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ಮಾಡಿ ಆಹ್ವಾನಿಸಿದ್ದು ನಿಜ. ಆದರೇ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಕಾರ್ಯಕ್ರಮದ ಒಂದು ದಿನ ಮುನ್ನ ಸಿಎಂ ಬೊಮ್ಮಾಯಿ ಕರೆ ಮಾಡಿ ಕರೆದರು. ಆದರೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿರಲಿಲ್ಲ, ಪ್ರೋಟೋಕಾಲ್ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಹೆಸರಿರಬೇಕು. ಸಿಎಂ, ಸ್ಪೀಕರ್, ರಾಜ್ಯಪಾಲರ ಬಳಿಕ ನನ್ನ ಹೆಸರು ಇರಬೇಕಿತ್ತು.   ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರೇ ಇಲ್ಲವೆಂದು ಪ್ರಶ್ನಿಸಿದ್ದೆ. ಆದರೂ ನನಗೆ ಮೀಟಿಂಗ್ ಇದೆ ಬರಲು ಆಗಲ್ಲ ಎಂದು ಹೇಳಿದೆ ಎಂದು ಸ್ಪಷ್ಟನೆ ನೀಡಿದರು.

ನಮ್ಮ  ಸರ್ಕಾರ ಏರ್ ಪೋರ್ಟ್ ಗೆ ಕೆಂಪೇಗೌಡರ ಹೆಸರು ಇಟ್ಟಿದ್ದು. ನಾನು ಸಿಎಂ ಆಗಿದ್ದ ವೇಳೆ ಕೆಂಪೇಗೌಡರ ಜಯಂತಿ ಮಾಡಿದ್ದವು. ನಿನ್ನೆ ಮೋದಿ ಸಮಾವೇಶಕ್ಕೆ ಹಣ ನೀಡಿ ಜನರನ್ನ ಕರೆ ತಂದಿದ್ದಾರೆ. ನಳಿನ್ ಕುಮಾರ್ ಕಟೀಲು ಒಬ್ಬ ಜೋಕರ್. ಮಂಡ್ಯದಲ್ಲಿ ಕಟೀಲ್ ಭಾಷಣದ ವೇಳೆ ಜನ ಎದ್ದು ಹೋಗಿದ್ದಾರೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

Key words:  CM-invite–kempegowda-statue-program-Former CM -Siddaramaiah..