‘ಪಿಂಕ್ ಸಾರಥಿ’ ವಾಹನಗಳನ್ನ ಲೋಕಾರ್ಪಣೆ ಮಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ…

Promotion

ಬೆಂಗಳೂರು,ಜೂ,6,2019(www.justkannada.in):  ನಿರ್ಭಯ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಖರೀದಿಸಲಾಗಿರುವ ಪಿಂಕ್ ಸಾರಥಿ  ವಾಹನಗಳನ್ನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಲೋಕಾರ್ಪಣೆ ಮಾಡಿದರು.

ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು  ಬಿಎಂಟಿಸಿಯ 25 ಪಿಂಕ್ ಸಾರಥಿ ವಾಹನಗಳಿಗೆ ಚಾಲನೆ ನೀಡಿದರು. ನಿರ್ಭಯ ಯೋಜನೆಯಡಿ  ಮಹಿಳೆಯರಿಗೆ ಭದ್ರತೆ ಮತ್ತು ಸುರಕ್ಷತೆಗಾಗಿ ಈ ಪಿಂಕ್ ಸಾರಥಿ ವಾಹನ ಖರೀದಿಸಲಾಗಿದೆ.

ಇನ್ನು ಇದೇ ವೇಳೆ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸ್ ಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದರು.  ಈ  ವೇಳೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ,  ಸಚಿವ ಪುಟ್ಟರಂಗಶೆಟ್ಟಿ ಬಿಎಂಟಿಸಿ ಅಧ್ಯಕ್ಷ ಎನ್. ಎ. ಹ್ಯಾರಿಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: CM HD Kumaraswamy, inducted into ‘Pink sarathi vehicles.

#bangalore #CMHDKumaraswamy #Pinksarathi  #vehicles.