13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆಗೆ ಸಿಎಂ ಬಿಎಸ್ ವೈ ಸಮ್ಮತಿ…

kannada t-shirts

ಬೆಂಗಳೂರು, ಡಿಸೆಂಬರ್ 01,2020(www.justkannada.in): ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯಲು 13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಪೂರಕ ವಾತಾವರಣವನ್ನು ನಿರ್ಮಿಸಲಿದೆ. ಆದಕಾರಣ, 2021ರ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಸಿನಿಮೋತ್ಸವವನ್ನು ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರ ನೇತೃತ್ವದ ನಿಯೋಗವು ಮಾಡಿದ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಂದಿಸಿದ್ದಾರೆ.cm-bsy-approves-13th-bangalore-international-film-festival-karnataka-film-academy

ಇಂದು ಸಿಎಂ ಬಿಎಸ್ ವೈ ಅವರನ್ನ ಭೇಟಿಯಾದ ನಿಯೋಗವು ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಸತತ ಕಳೆದ 12 ವರ್ಷಗಳ ಕಾಲ ಯಶಸ್ಸನ್ನು ಕಂಡಿದೆ. ವಿಶ್ವದಲ್ಲಿ 5000 ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಆದರೆ, ಅವುಗಳಲ್ಲಿ ಕೇವಲ 45 ಚಲನಚಿತ್ರೋತ್ಸವಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ. ಇದೀಗ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಒಂದು ವೇಳೆ  ಮಾನ್ಯತೆ ದೊರೆತಲ್ಲಿ ಇದು ವಿಶ್ವದಲ್ಲಿ 46ನೇ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಆದ್ದರಿಂದ 13 ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಆಯೋಜಿಸಲು ಸಮ್ಮತಿ ನೀಡುವಂತೆಯೂ ಹಾಗೂ ಅದಕ್ಕೆ ಅಗತ್ಯ ಅನುದಾನವನ್ನು ದೊರಕಿಸಿಕೊಡುವಂತೆಯೂ ನಿಯೋಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿತು.

ಭಾರತದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತವೆ. ಗೋವಾದಲ್ಲಿ ಭಾರತ ಸರ್ಕಾರ ಚಲನಚಿತ್ರೋತ್ಸವವನ್ನು ಆಯೋಜಿಸುತ್ತದೆ. ಉಳಿದಂತೆ ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳು ಚಲನನಚಿತ್ರೋತ್ಸವಗಳನ್ನು ಆಯೋಜಿಸುತ್ತಿವೆ ಎಂಬ ಅಂಶವನ್ನು ನಿಯೋಗವು ಮುಖ್ಯಮಂತ್ರಿಯವರ ಗಮನಕ್ಕೆ ತಂದಿತು.cm-bsy-approves-13th-bangalore-international-film-festival-karnataka-film-academy

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್.ಜಯರಾಜ್, ಕಲಾನಿರ್ದೇಶಕ ಎನ್. ವಿದ್ಯಾಶಂಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಹಾಗೂ ಹೆಸರಾಂತ ಚಿತ್ರನಟಿ ಶ್ರೀಮತಿ ಶೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ, ಹಿರಿಯ ಪತ್ರಕರ್ತ ಮತ್ತು ಚಿತ್ರ ವಿಮರ್ಶಕ ಮುರಳೀಧರ್ ಖಜಾನೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಿ.ಹಿಮಂತರಾಜು ಅವರು ಈ ನಿಯೋಗದಲ್ಲಿದ್ದರು.

English summary…

CM BSY nods for the 13th Bengaluru International Film Festival
Bengaluru, Dec. 1,2020 (www.justkannada.in): The 13th Bengaluru International Film Festival will create an atmosphere to attract the audience towards the cinema theatres again. Chief Minister B.S. Yedyurappa has given his nod to an appeal made by the delegation led by Sri Sunil Puranik, President, Karnataka Chalanachitra Academy, to permit to conduct the 13th Bengaluru International Film Festival in the third or fourth week of February 2021.
The delegation met the Chief Minister today and explained to him the success of the film festival and sought his permission to conduct it and also to provide grants.cm-bsy-approves-13th-bangalore-international-film-festival-karnataka-film-academy
The Karnataka Film Chamber of Commerce President D.R. Jayaraj, Art Director N. Vidyashankar, Karnataka State Tourism Development Corporation President, and renowned film actress Smt. Shruti, Information and Public Information Department Commissioner Dr. P.S. Harsha, senior journalist and film critic Muralidhar, treasurer, and Karnataka Chalanachitra Academy Registrar R. Himantharaju were in the delegation.
Keywords: Chief Minister B S Yedyurappa/ 13th Bengaluru International Film Festival

Key words: CM BSY -approves – 13th Bangalore International Film Festival-Karnataka Film Academy

website developers in mysore