ನಮ್ಮ ಶಾಸಕರ ಕ್ಷೇತ್ರದ ಅನುದಾನ ನಿಲ್ಲಿಸುವ ಮೂಲಕ ಸಿಎಂ ದ್ವೇಷದ ರಾಜಕಾರಣ: ಸಿದ್ದರಾಮಯ್ಯ ಆರೋಪ: ಸದನದಲ್ಲೇ ಸ್ಪಷ್ಟನೆ ಕೊಟ್ಟ ಸಿಎಂ ಬಿಎಸ್ ವೈ…

kannada t-shirts

ಬೆಂಗಳೂರು,ಫೆ,20,2020(www.justkannada.in):  ನಮ್ಮ ಶಾಸಕರ ಕ್ಷೇತ್ರದ ಅನುದಾನವನ್ನ ನಿಲ್ಲಿಸಿದ್ದಾರೆ. ಈ ಮೂಲಕ ಸಿಎಂ ಬಿಎಸ್ ವೈ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರೋಪಿಸಿದರು.

ವಿಧಾನಸಭೆ ಕಲಾಪದಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಸಿಎಂ ಬಿಎಸ್ ವೈ  ದ್ವೇಷದ ರಾಜಕಾರಣ ಮಾಡಲ್ಲ ಅಂದಿದ್ದರು. ಈಗ ನಮ್ಮ ಶಾಸಕರ ಕ್ಷೇತ್ರಗಳಿಗೆ ಅನುದಾನ ನಿಲ್ಲಿಸಿದ್ದಾರೆ. ಇದೇ ನೀವು ಮಾಡೋದು ಎಂದು ಕಿಡಿಕಾರಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಭಿಮಾನಾಯ್ಕ, ನಮ್ಮ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತವಾಗಿದೆ.  7 ಲಕ್ಷ ಜನ ಸೇರುವ ಕೊಟ್ಟೂರು ಜಾತ್ರೆಯ ಅನುದಾನಕ್ಕೆ ಕೊಕ್ಕೆ ಹಾಕಿದ್ದಾರೆ. ಜನ ನಮಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಸಮ್ಮಿಶ್ರ ಸರ್ಕಾರದ ವೇಳೆ ಶಾಸಕರ ಅನುದಾನ ತಾರತಮ್ಯ ಪ್ರಸ್ತಾಪಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿತ್ತು. 2018-19ಸಾಲಿನಲ್ಲಿ  ಬಿಜೆಪಿಯ 105 ಶಾಸಕರಿಗೆ ಎಷ್ಟು ಅನುದಾನ ನೀಡಲಾಗಿತ್ತೋ ಅದಕ್ಕೂ ಹೆಚ್ಚು ಅನುದಾನವನ್ನ ಜೆಡಿಎಸ್ ನ 37 ಶಾಸಕರಿಗೆ ನೀಡಲಾಗಿತ್ತು. ಬಿಜೆಪಿ 105 ಶಾಸಕರಿಗೆ 2986 ಕೋಟಿ,  ಜೆಡಿಎಸ್ ನ 37 ಶಾಸಕರಿಗೆ 2974 ಕೋಟಿ  ಕಾಂಗ್ರೆಸ್ 79 ಶಾಸಕರಿಗೆ 3834ಕೋಟಿ ಅನುದಾನ ನೀಡಲಾಗಿತ್ತು. ಅನುದಾನ ತಾರತಮ್ಯದ ಬಗ್ಗೆ ಗೊತ್ತಿದ್ದರೂ ನಾವು ಸುಮ್ಮನಿದ್ದವು ಎಂದು ಹೇಳಿದರು.

Key words: CM bs yeddyurappa-stopping – grant – our MLA-constituency-former cm-Siddaramaiah

website developers in mysore