ಬಿಜೆಪಿ ಶಾಸಕರ ಜತೆ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ: ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ ಗೈರು…

ಬೆಂಗಳೂರು,ಸೆ,14,2019(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಇಂದು  ಬೆಳಗಾವಿ ಜಿಲ್ಲಾ ಬಿಜೆಪಿ ಶಾಸಕರ ಜೊತೆ  ಸಭೆ ನಡೆಸಿ ಹಲವು ವಿಚಾರ ಚರ್ಚಿಸಿದರು.

ಸಿಎಂ ಬಿಎಸ್  ಯಡಿಯೂರಪ್ಪ ಸಭೆಗೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಪಿ.ರಾಜೀವ್ ಸೇರಿದಂತೆ ಬಹುತೇಕ ಪಕ್ಷದ ಶಾಸಕರು ಹಾಜರಾಗಿದ್ದರು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಡಿಸಿಎಂ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.

ಸಭೆಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ ಗೈರು, ಲಕ್ಷ್ಮಣ್ ಸವದಿ ಗೈರಾಗಿದ್ದರು.  ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನ ಸಿಗದಿರುವುದರಿಂದ ಅಸಮಧಾನಗೊಂಡಿದ್ದು ಇದೀಗ ಸಿಎಂ ಜೊತೆಗಿನ‌ ಸಭೆಗೆ ಗೈರಾಗಿದ್ದಾರೆ.  ಬೆಳಗಾವಿ ಜಿಲ್ಲಾ ನೆರೆಪೀಡಿದ ಪ್ರದೇಶಗಳಿಗೆ ಮೊನ್ನೆ ಸಿಎಂ ಭೇಟಿ ವೇಳೆಯೂ ಉಮೇಶ್ ಕತ್ತಿ ಗೈರಾಗಿದ್ದರು.

ಸಭೆ ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಪ್ರವಾಹ ಪರಿಸ್ಥಿತಿ ಸಂಬಂಧ ಸಿಎಂ‌ಬ ನಮ್ಮ ಜೊತೆ ಚರ್ಚೆ ಮಾಡಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಪರಿಹಾರ ಕಾರ್ಯ, ಪುನರ್ವಸತಿ ಕಾರ್ಯ ಬಗ್ಗೆ ಕ್ರಮ ಕೈಗೊಳ್ಳೂತ್ತಿದೆ. ನಮ್ಮ ನಮ್ಮ‌ ಕ್ಷೇತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಸಿಎಂಗೆ ಮಾಹಿತಿ ಕೊಟ್ಟಿದ್ದೇವೆ ಎಂದರು.

ಬೆಳಗಾವಿ ಭಾಗದ ಪ್ರಮುಖ ಶಾಸಕರು ಗೈರು ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಸಭೆಗೆ ಎಲ್ಲ ಶಾಸಕರಿಗೂ ಆಹ್ವಾನ‌ ಇತ್ತು ಆದ್ರೆ ಕೆಲವರು ಪೂರ್ವಭಾವಿ ಕೆಲಸಗಳ‌ ಕಾರಣ ಬಂದಿಲ್ಲ ಎಂದರು.

Key words: CM BS Yeddyurappa- meets – BJP MLAs-Balachandra Zarakiiholi- Umesh katti-absent