ಒಕ್ಕಲಿಗ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಿದ ಸಿಎಂ ಬಿಎಸ್ ವೈ…

ಬೆಂಗಳೂರು,ಮಾರ್ಚ್,8,2021(www.justkannada.in) ರಾಜ್ಯದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಬಜೆಟ್ ನಲ್ಲಿ ಭರ್ಜರಿ ಗಿಫ್ಟ್ ನೀಡಿದ್ದಾರೆ.jk

 ವಿಧಾನಸೌಧದಲ್ಲಿ ಬಜೆಟ್  ಮಂಡನೆ ಮಾಡುತ್ತಿರುವ  ಸಿಎಂ ಬಿ.ಎಸ್. ಯಡಿಯೂರಪ್ಪ, ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹೊಸ ನಿಮಗ ಸ್ಥಾಪಿಸಲಾಗುವುದು, ಜತೆಗೆ ಇದಕ್ಕೆ 500 ಕೋಟಿ ರೂ. ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಒಕ್ಕಲಿಗ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂಪಾಯಿ, ಹಿಂದುಳಿದ ವರ್ಗಗಳಿಗೆ 500 ಕೋಟಿ ರೂಪಾಯಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 50 ಕೋಟಿ ಅನುದಾನ ಮೀಸಲಿಡಲಾಗುತ್ತದೆ. ಇನ್ನು ಮೇಕೆದಾಟು ಯೋಜನೆಗೆ ಕಾಯಕಲ್ಪ, 9000 ಕೋಟಿ ರೂ. ರೂ. ಅನುದಾನ ಮೀಸಲು. ಗೋರಕ್ಷಣೆಗೆ ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯಲು ತೀರ್ಮಾನ ಮಾಡಲಾಗಿದೆ. ಎಂದು ತಿಳಿಸಿದ್ದಾರೆ.

ಇನ್ನು ಬಜೆಟ್ ನಲ್ಲಿ ಬೇಡ್ತಿ, ವರದಾ ನದಿ ಜೋಡಣೆ,. ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ. ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್ ನಿರ್ಮಾಣ, ಕಿತ್ತೂರು ಅಭಿವೃದ್ದಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ. ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ದಿಗೆ 5 ಕೋಟಿ ರೂಪಾಯಿ. ಸರ್ಕಾರಿ ಶಾಲೆಗಳ ಪೀಠೋಪಕರಣಕ್ಕೆ 50 ಕೋಟಿ ರೂಪಾಯಿ ಮೀಸಲು, ಸ್ಮಾರ್ಟ್ ಕ್ಲಾಸ್ ರೂಂಗಳಿಗಾಗಿ 50 ಕೋಟಿ ರೂ.ಅನುದಾನ ನೀಡಲಾಗುತ್ತದೆ.

CM BS Yeddyurappa- gift -okkaliga community-budget

ಜಯದೇವ, ಕೆಸಿ ಜನರಲ್ ಆಸ್ಪತ್ರೆಗೆ 20 ಕೋಟಿ ರೂಪಾಯಿ, 50 ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ. ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ ರೂಪಾಯಿ, ಕೆಸಿ ವ್ಯಾಲಿ ನೀರು ಶುದ್ದೀಕರಣಕ್ಕೆ 450 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದರು.

Key words: CM BS Yeddyurappa- gift -okkaliga community-budget