ಲಸಿಕೆ ಪಡೆದ ಕೋವಿಡ್ ಯೋಧರಿಗೆ ಹೂಗುಚ್ಛ ನೀಡಿ ಅಭಿನಂದಿಸಿದ ಸಿಎಂ ಬಿಎಸ್ ವೈ…

ಬೆಂಗಳೂರು, ಜನವರಿ 16,2021(www.justkannada.in):  ಜಗತ್ತಿನ ಸಾಂಕ್ರಾಮಿಕ ರೋಗವಾಗಿ ಕಾಡಿದ ಕೋವಿಡ್ -19 ಕ್ಕೆ ಔಷಧಿಯನ್ನು  ಇಂದು ದೇಶದಲ್ಲಿ ಏಕಕಾಲಕ್ಕೆ ನೀಡಲು ಆರಂಭಿಸಲಾಯಿತು.cm-bs-yeddyurappa-congratulates-kovid-19-vaccine-campaign-victoria-hospital-bangalore

ರಾಷ್ಟ್ರಮಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ತಡೆಗಟ್ಟುವ ಲಸಿಕೆಯನ್ನು ಮೊದಲ ಬಾರಿಗೆ  10 ಕೋವಿಡ್ ಯೋಧರಿಗೆ ನೀಡುವ ಮೂಲಕ ಚಾಲನೆ  ನೀಡಿದರು.

ಕೋವಿಡ್ ಸಮಯದಲ್ಲಿ ಅವಿರತವಾಗಿ ದುಡಿದ ಬೆಂಗಳೂರಿನ ನಾಗರತ್ನ ಕೆ 28 ವರ್ಷ, ಗಂಗಾಧರ್, ಡಾ. ಸುಶಾಂತ್ 35ವರ್ಷ, ಕೀರ್ತಿ 28 ವರ್ಷ, ಮಾಲಾ 30 ವರ್ಷ, ಲೋಕೇಶ್ ಜಿ 28 ವರ್ಷ, ವಿಷ್ಣುಪ್ರಿಯ 24ವರ್ಷ, ವರುಣ್ ಕುಮಾರ್ 26, ಡಾ. ಸಂದೇಶ್ ಕಂಡವಾಲಾ 32ವರ್ಷ, ಮನೋಜ್ ಬಿ.ಎಸ್ 23 ವರ್ಷ, ಜಯಂತಿ 32 ವರ್ಷ ಅವರಿಗೆ ಲಸಿಕೆ ನೀಡಲಾಯಿತು.cm-bs-yeddyurappa-congratulates-kovid-19-vaccine-campaign-victoria-hospital-bangalore

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ: ಕೆ. ಸುಧಾಕರ್ ಅವರು ಉಪಸ್ಥಿತರಿದ್ದರು.  ಲಸಿಕೆ ಪಡೆದವರಿಗೆ ಹೂಗುಚ್ಛ ನೀಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಭಿನಂದಿಸಿದರು.

Key words: CM BS yeddyurappa –congratulates- Kovid-19- Vaccine Campaign -Victoria Hospital- Bangalore.