ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ನಿಧನಕ್ಕೆ ಸಿಎಂ ಬಿಎಸ್ ವೈ ಸಂತಾಪ

ಬೆಂಗಳೂರು, ಡಿಸೆಂಬರ್ 15,2020(www.justkannada.in):  ಜಗದ್ವಿಖ್ಯಾತ ವಿಜ್ಞಾನಿ, ಪದ್ಮವಿಭೂಷಣ ರೊದ್ದಂ ನರಸಿಂಹ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.I didn't knew CM BSY will think so cheaply - KPCC President D.K. Shivakumar

ಏರೋಸ್ಪೇಸ್ ಮತ್ತು ಬಾಹ್ಯಾಕಾಶ ವಿಜ್ಞಾನಕ್ಕೆ ರೊದ್ದಂ ನರಸಿಂಹ ಅವರ ಕೊಡುಗೆ ಮಹತ್ವಪೂರ್ಣವಾದುದು. ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷಾ ಪ್ರವೀಣರಾಗಿದ್ದ ಅವರು ವಿಜ್ಞಾನ ಮತ್ತು ತತ್ವಜ್ಞಾನದ ನಡುವಿನ ಸಂಬಂಧದ ಕುರಿತಂತೆ ರಚಿಸಿದ ಕೃತಿಗಳೂ ಅಷ್ಟೇ ಮಹತ್ವ ಹೊಂದಿದ್ದವು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಬಣ್ಣಿಸಿದ್ದಾರೆ.

ಅವರ ನಿಧನದಿಂದ ದೇಶ ಶ್ರೇಷ್ಠ ವಿಜ್ಞಾನಿಯೊಬ್ಬರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದವರು, ಅಭಿಮಾನಿ ಬಳಗದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.CM BS yeddyurappa- condolences - death - scientist -Roddam Narasimha

ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ಅವರು ಒಂದು ವಾರದಿಂದ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 48 ಗಂಟೆಗಳಿಂದ ಕೃತಕ ಉಸಿರಾಟ ವ್ಯವಸ್ಥೆಯ ನೆರವಿನಲ್ಲಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ  ನಿನ್ನೆ ರಾತ್ರಿ  ನಿಧನರಾಗಿದ್ದಾರೆ.

Key words: CM BS yeddyurappa- condolences – death – scientist -Roddam Narasimha