ದೇವರಾಜ ಅರಸು ಅವರ ಯೋಜನೆಯನ್ನು ಮುಂದುವರೆಸುವ ಬದ್ಧತೆ ತೋರಿದ್ದು ಸಿಎಂ ಬಿಎಸ್ ಯಡಿಯೂರಪ್ಪ- ಬಿವೈ ವಿಜಯೇಂದ್ರ ನುಡಿ…

ಮೈಸೂರು,ನ,23,2019(www.justkannada.in): ಬಸವಣ್ಣನವರ ಕಲ್ಯಾಣ ಕಾರ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದೇವರಾಜ ಅರಸರು ಶೋಷಿತ ಸಮುದಾಯಗಳಿಗೆ ದನಿಯಿಲ್ಲದವರಿಗೆ ಅನೇಕ ಯೋಜನೆಗಳನ್ನು ರೂಪಿಸಿದರು. ಆನಂತರದಲ್ಲಿ ದೇವರಾಜ ಅರಸರ ಯೋಜನೆಗಳನ್ನು ಮುಂದುವರಿಸಿಕೊಂಡು ಸಾಮಾಜಿಕ ನ್ಯಾಯದ ಬದ್ಧತೆ ತೋರಿದವರು ಮುಖ್ಯಮಂತ್ರಿ ಯಡಿಯೂರಪ್ಪನವರು. ದನಿಯಿಲ್ಲದ ಸಮಾಜಗಳಿಗೆ ರಾಜಕೀಯ ಅಧಿಕಾರವನ್ನು, ಶೈಕ್ಷಣಿಕ ಅವಕಾಶವನ್ನು, ಔದ್ಯೋಗಿಕಾವಕಾಶಗಳನ್ನು, ನೀಡುವಂಥ ಅನೇಕ ಕಾರ್ಯಕ್ರಮಗಳ ಯೋಜನೆಗಳನ್ನು ಯಡಿಯೂರಪ್ಪನವರ ಅಧಿಕಾರದ ಆಡಳಿತಾವಧಿಯಲ್ಲಿ ನೀಡಿದರು ಎಂದು ಸಿಎಂ ಬಿಎಸ್ ವೈ ಪುತ್ರ ಬಿವೈ ವಿಜಯೇಂದ್ರ ತಿಳಿಸಿದರು.

ಉಪಚುನಾವಣೆ ಹಿನ್ನೆಲೆ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರ ನಡೆಸಿ ಮಾತನಾಡಿದ ಬಿ.ವೈ ವಿಜಯೇಂದ್ರ, ಬೂಕನಕೆರೆಯಲ್ಲಿ ರಾಜಕೀಯ ಖಾತೆ ಆರಂಭಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಅವರಲ್ಲಿರುವ ಸಾಮಾಜಿಕ ಬದ್ಧತೆ, ಹೋರಾಟದ ಗುಣಗಳಿಂದಾಗಿ ಅತ್ಯುನ್ನತ ಎತ್ತರಕ್ಕೆ ಬೆಳೆಯುವಂತಾಯಿತು.ದೇಶದ ಇತಿಹಾಸದಲ್ಲಿ ಒಬ್ಬ ರಾಜಕಾರಣಿ ಮಾಜಿ ಆದರೆ ಮತ್ತೆ ತಲೆಯೆತ್ತಿ ನಿಲ್ಲುವುದು ಸುಲಭದ ಮಾತಲ್ಲ. ಆದರೆ ಯಡಿಯೂರಪ್ಪನವರು ಜನರೊಂದಿಗಿನ ನಿರಂತರ ಒಡನಾಟದ ಫಲವಾಗಿ, ರಾಜ್ಯದ ಜನತೆಯ ಅಭಿಲಾಷೆಯ ನಾಯಕತ್ವದ ಗುಣದಿಂದಾಗಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಗಳಾಗಿ ನಿಮ್ಮಮುಂದೆ ನಿಂತಿದ್ದಾರೆ ಎಂದರು.

2018ರ ವಿಧಾನಸಭಾ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿ ಹಾಗೂ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಗಳನ್ನಾಗಿ ಮಾಡವ ಜನಾದೇಶವಾಗ್ಗಿತ್ತು. ಆದರೆ ಅನೀತಿ ರಾಜಕಾರಣದಲ್ಲಿ ಅವರನ್ನು ಮುಖ್ಯಮಂತ್ರಿಯಾಗುವ ಅವಕಾಶದಿಂದ ತಪ್ಪಿಸಲಾಯಿತು. ಅಪವಿತ್ರ ಮೈತ್ರಿಯ ಸರಕಾರ ಅವರವರ ಆಂತರಿಕ ಕಲಹಗಳಿಂದ ಕುಸಿದುಹೋಯಿತೇ ಹೊರತು ಬೇರಾವುದೇ ಕಾರಣದಿಂದಲ್ಲ. ಈ ರಾಜ್ಯದಲ್ಲಿ ನೈತಿಕ ರಾಜಕಾರಣ ಮರುಸ್ಥಾಪನೆಯಾಗಬೇಕು ಯಡಿಯೂರಪ್ಪನವರ ಪರವಾದ 2018ರ ಚುನಾವಣಾ ಫಲಿತಾಂಶಕ್ಕೆ ತೀರ್ಪು ಬರುವ ನಿಟ್ಟಿನಲ್ಲಿ ಈಗ ಬಂದಿರುವ ಉಪ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಆಶೀರ್ವಾದಿಸಬೇಕು ಎಂದು ಮತದಾರರನ್ನು ವಿನಂತಿಸಿದರು.

ಅಡಗೂರು ವಿಶ್ವನಾಥ ರವರು ದೇವರಾಜ ಅರಸರ ಚಿಂತನೆ ಮತ್ತು ಯಡಿಯೂರಪ್ಪನವರ ಹೋರಾಟದ ಪ್ರತಿನಿಧಿಯಾಗಿ ಹುಣಸೂರನ್ನು ಪ್ರತಿನಿಧಿಸಲಿದ್ದಾರೆ. ಅವರನ್ನು ಗೆಲ್ಲಿಸಿದ್ದೇ ಆದಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಹುಣಸೂರಿನ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದ್ದಾರೆ

ಈ ನಿಟ್ಟಿನಲ್ಲಿ ಕಾಯಕ ಸಮುದಾಯಗಳು ಅವರ ಬೆನ್ನಿಗೆ ನಿಲ್ಲಬೇಕೆಂದು ಇಂದು ಕಾಯಕ ಸಮುದಾಯಗಳಾದ ಮಡಿವಾಳ, ಕುಂಬಾರ, ಗಾಣಿಗ, ವಿಶ್ವಕರ್ಮ, ಈಡಿಗ,ಸವಿತಾ ಸಮಾಜ, ಮೊದಲಾದ ಅನೇಕ ಸಮುದಾಯಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ವಿಜಯೇಂದ್ರ ಮಾತನಾಡಿದರು

ಭಾರತೀಯಯ ಜನತಾ ಪಾರ್ಟಿಯ ಸಹ-ವಕ್ತಾರ “ಕೌಟಿಲ್ಯ ರಘು” ಪ್ರಾಥಮಿಕ ಭಾಷಣ ಮಾಡಿದರು ಈ ಸಂದರ್ಭದಲ್ಲಿ ವಿಭಾಗದ ಪ್ರಭಾರಿ ರವಿಶಂಕರ್ ಅವರು ಉಸ್ತುವಾರಿ ಗಳಾದ ಶಾಸಕ ಅಪ್ಪಚ್ಚುರಂಜನ್ ರವರು ರಾಜ್ಯ ಪದಾಧಿಕಾರಿಗಳಾದ ರಾಜೇಂದ್ರ, ನಾಗರಾಜ ಮಲ್ಲಾಡಿ, ರಾಜೀವ್, ಡಾಕ್ಟರ್ ಮಂಜುನಾಥ, ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಹುಣಸೂರಿನಲ್ಲಿ ಎಚ್ ವಿಶ್ವನಾಥ್ ರವರ ಚುನಾವಣಾ ಪ್ರಚಾರದಲ್ಲಿ ಅನೇಕ ಕಾಯಕ ಸಮುದಾಯಗಳ ಮುಖಂಡರ ಸಭೆಯಲ್ಲಿ ಭಾಗವಹಿಸಲಾಯಿತು.  ಸಭೆಯಲ್ಲಿ ವಿಭಾಗೀಯ ಪ್ರಭಾರಿ ವೈ ರವಿಶಂಕರ್ ರವರು, ಉಸ್ತುವಾರಿಗಳಾದ ಶಾಸಕ ಅಪ್ಪಚ್ಚು ರಂಜನ್ ರವರು,ಸಹ-ವಕ್ತಾರ ಕೌಟಿಲ್ಯ ರಘುರವರು, ರಾಜ್ಯ ಪದಾಧಿಕಾರಿಗಳಾಗ ರಾಜೇಂದ್ರರವರು,ರಾಜೀವ್ ರವರು ನಾಗರಾಜ್ ಮಲ್ಲಾಡಿಯವರು, ಡಾಕ್ಟರ್ ಮಂಜುನಾಥ್ ರವರು ಮೊದಲಾದ ಅನೇಕ ಮುಖಂಡರು ಉಪಸ್ಥಿತರಿದ್ದರು.

Key words: CM BS Yeddyurappa – commitment – continue – project – Devaraja Arasu-BY Vijayendra -hunsur