ಶಾಸಕ ಎಂ.ಪಿ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ.

ದಾವಣಗೆರೆ,ನವೆಂಬರ್,9,2022(www.justkannada.in): ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರಶೇಖರ್ ಸಾವನ್ನಪ್ಪಿದ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ದಾವಣಗೆರೆಯ ಹೊನ್ನಾಳಿಯಲ್ಲಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,   ಅಪಘಾತ ಸೇರಿ ವಿವಿಧ ಆಯಾಮಗಳಲ್ಲಿ ತನಿಖೆಗೆ ಪೊಲೀಸರಿಗೆ ಸೂಚಿಸಿದ್ದೇನೆ.  ಈಗಾಗಲೇ ತನಿಖೆ ನಡೆಯುತ್ತಿದೆ.  ಈ ರೀತಿ ಸಾವು ಆಗುತ್ತೆ ಎಂದು ಯಾರೂ ಭಾವಿಸಿರಲಿಲ್ಲ ಎಂದರು. ರೇಣುಕಾಚಾರ್ಯ ನನ್ನ ಸಹೋದರ ಇದ್ದಂತೆ. ರೇಣುಕಾಚಾರ್ಯ ಕೆಲಸ ಕಾರ್ಯವನ್ನ ಚಂದ್ರು ನೋಡಿಕೊಳ್ಳುತ್ತಿದ್ದ ಎಂದು ತಿಳಿಸಿದರು.

ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ,  ಯಾವುದೋ ಪುಸ್ತಕ ನೋಡಿಕೊಂಡು ಹೇಳಿಕೆ ಕೊಡುವುದಲ್ಲ ವಿಕಿಪಿಡಿಯಾದ ವಿಶ್ವಾಸರ್ಹತೆ ಎಷ್ಟಿದೆ ಅಂತಾ ಗೊತ್ತಿದೆ  ವಿಕಿಪಿಡಿಯಾ  ಮೇಲೆ ಸಾಕಷ್ಟು ಪ್ರಕರಣಗಳಿವೆ . ಬಹಿರಂಗ ಸಭೆಯಲ್ಲಿ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ. ವಿಕಿಪಿಡಿಯಾ  ಮುಖ್ಯಸ್ಥ  ಈಗಾಗಲೇ ಜೈಲಿನಲ್ಲಿದ್ದು ಬಂದವನು. ಅಂಥವರ ವಿಚಾರ ನಂಬಿ ಪ್ರತಿಪಾದಿಸುತ್ತಾರೆ ಎಂದ್ರೆ ಏನು ಹೇಳಲಿ ಎಂದು ಕಿಡಿಕಾರಿದರು.

Key words: CM Bommai -visited -MLA -MP Renukacharya-residence – condolences.