ಸಚಿವ ಅಶ್ವಥ್ ನಾರಾಯಣ್ ಬೆಂಬಲಕ್ಕೆ ನಿಂತ ಸಿಎಂ ಬೊಮ್ಮಾಯಿ: ಕಾಂಗ್ರೆಸ್ ಆರೋಪಕ್ಕೆ ತಿರುಗೇಟು.

ಬೆಂಗಳೂರ,ಮೇ,5,2022(www.justkannada.in):  ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪಗಳೆಲ್ಲವೂ ಆಧಾರ ರಹಿತ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು ಈ ಮೂಲಕ ಸಚಿವ ಅಶ್ವಥ್ ನಾರಾಯಣ್ ಬೆಂಬಲಕ್ಕೆ ನಿಂತಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಶ್ವಥ್ ನಾರಾಯಣ್ ವಿರುದ್ಧದ ಆರೋಪಗಳೆಲ್ಲವೂ ಆಧಾರ ರಹಿತ.  ಯಾವುದೇ ಆಧಾರವಿಲ್ಲದೇ ಕಾಂಗ್ರೆಸ್ ಆರೋಪಿಸುತ್ತಿದೆ.  ಅಶ್ವತ್ ನಾರಾಯಣ್ ವಿರುದ್ದ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಇದ್ದಾಗಲೂ ಅಕ್ರಮ ನಡೆದಿತ್ತು . ಆಗ ಕಾಂಗ್ರೆಸ್ ನವರು ಕ್ರಮ ಕೈಗೊಂಡಿರಲಿಲ್ಲ.  ಈಗ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿರುಗೇಟು ನೀಡಿದರು.

ಪಿಎಸ್ ಐ ಹಗರಣ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಜವಾಬ್ದಾರಿಯುತ ಪಕ್ಷ. ಡಾ. ಅಶ್ವತ್ ನಾರಾಯಣ್ ವಿರುದ್ದ ಆರೋಪಕ್ಕೆ ಸಣ್ಣ ಸಾಕ್ಷ್ಯವೂ ನೀಡಿಲ್ಲ. ಪ್ರಕರಣ ಕುರಿತು ಸರ್ಕಾರದಿಂದ ನಿಷ್ಪಕ್ಷಪಾತ, ಪ್ರಾಮಾಣಿಕವಾಗಿ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ನವರಿಗೆ ಬಣ್ಣ ಬಯಲಾಗುತ್ತೆ ಎಂಬ ಭಯವಿದೆ ಎಂದು ಟಾಂಗ್ ನೀಡಿದರು.

Key words: CM Bommai-support– Minister-Ashwath Narayan

ENGLISH SUMMARY…

CM Bommai supports Minister Ashwathnarayana: Responds to Congress allegations
Bengaluru, May 5, 2022 (www.justkannada.in): Chief Minister Basavaraj Bommai today informed that all the allegations made by the Congress party against Minister Ashwathanarayana are baseless.
Addressing the media persons in Bengaluru today, the Chief Minister said, “all the allegations against Ashwathanarayana are completely baseless. They are making baseless allegations. They are just doing hit and run against Ashwathanarayana. Corruption had taken place even when they were in power. But they had not taken any action then. However, the BJP government is taking action at present.”
“Investigation is being held in all the angles. Congress is a responsible party. But there is not even a single evidence for its allegations against Minister Ashwathanarayana. The investigation is being conducted without any bias. The Congress leaders are afraid that their true colours will get exposed,” he added.
Keywords: Chief Minister Basavaraj Bommai/ Congress/ Minister Ashwathanarayana/ allegations/ baseless