ಕಲ್ಯಾಣ ಕರ್ನಾಟಕಕ್ಕೆ ಸಿಎಂ ಬೊಮ್ಮಾಯಿ ಬಂಪರ್ ಕೊಡುಗೆ: 1500 ಕೋಟಿ ರೂ. ಘೋಷಣೆ.

ಕಲಬುರಗಿ,ಸೆಪ್ಟಂಬರ್,17,2021(www.justkannada.in):  ಕಲ್ಯಾಣ ಕರ್ನಾಟಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಂಪರ್ ಘೋಷಣೆ ಮಾಡಿದ್ದಾರೆ. ಹೌದು  ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕಕ್ಕೆ 1500 ಕೋಟಿ ರೂ. ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು‌ ಇಂದು ಕಲಬುರಗಿ ನಗರ ಡಿಆರ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ,  ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೆಚ್ಚುವರಿಯಾಗಿ 1500 ಕೋಟಿ ರೂ ನೀಡುವೆ. ಈ ಹಣವನ್ನ ಸಂಪೂರ್ಣವಾಗಿ ಬಳಸಿಕೊಳ್ಳಿ. ನನ್ನ ಮಾತನ್ನ ಸವಾಲಾಗಿ ಸ್ವೀಕರಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಿ ಎಂದು ಕರೆ ನೀಡಿದರು.

ಕಲ್ಬುರ್ಗಿಯಲ್ಲಿ ನೂತನ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಕರ್ನಾಟಕದ ಏಕೀಕರಣಕ್ಕೆ ಹಿರಿಯರ ಪಾತ್ರ ದೊಡ್ಡದು. ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ನೀಡಲಾಗಿದೆ. ಆಡಳಿತ ನಡೆಸುವವರ ಮನಸ್ಥಿತಿ ಬದಲಾವಣೆಯಾಗುವವರೇಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಲ್ಲ. ಆದರೆ ನಾವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ಧ ಎಂದರು.

ಇದಕ್ಕೂ ಮುನ್ನ‌ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ನವ ಕಲ್ಯಾಣ ಕರ್ನಾಟಕ, ನವ ಕರ್ನಾಟಕ ನಿರ್ಮಾಣಕ್ಕೆ ಆದ್ಯತೆಯಾಗಿದೆ. ಪಟೇಲರ ಕೊಡುಗೆ ದೇಶಕ್ಕೆ ಅಪಾರವಾದದ್ದು, ಅವರು ಹಾಕಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು.

Key words: CM- Bommai -Bumper -Contribution – kalyana Karnataka- 1500 crores- Declaration.

ENGLISH SUMMARY…

CM Bommai’s bumper gift to Kalyana Karnataka: Announces additional Rs. 1,500 cr. grants
Kalaburagi, September 17, 2021 (www.justkannada.in): Chief Minister Basavaraj Bommai has given a bumper gift to the Kalyana Karnataka region by announcing an additional Rs.1,500 crore grant for various developmental works.
CM Basavaraj Bommai participated in a program organized as part of the Kalyana Karnataka Utsav, held at the D.R. Grounds in Kalaburagi. Speaking on the occasion, he announced that an additional Rs.1,500 crore would be provided to the Kalyana Karnataka Development Board and asked the officials concerned to utilize it properly and completely. He asked the Board members and officials to take his words as a challenge and implement developmental works.
Further, he informed that the State Government has decided to establish a new textile park at Kalaburagi. “The role of our seniors in uniting Karnataka is immense, as a result of which Kalyana Karnataka region has received the 371(J) status. Development of the Kalyana Karnataka region will not become true unless the mindset of the administrators changes,” he said.
Keywords: Chief Minister Basavaraj Bommai/ Kalyana Karnataka/ Rs.1,500/ additional grants