ಉದ್ಯೋಗ ದೊರೆಯದ ಯುವಕರಿಗೆ ‘ಯುವಸ್ನೇಹಿ’ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ.

kannada t-shirts

ಬೆಂಗಳೂರು,ಫೆಬ್ರವರಿ,17,2023(www.justkannada.in): ರಾಜ್ಯ ಬಜೆಟ್‌ನಲ್ಲಿ ʼಯುವ ಸ್ನೇಹಿʼ ಮತ್ತು ʼಬದುಕಿನ ದಾರಿʼ ಹೆಸರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೊಸ ಯೋಜನೆಯನ್ನ ಘೋಷಿಸಿದ್ದಾರೆ.

ಪದವಿ ಶಿಕ್ಷಣವನ್ನು ಪೂರೈಸಿ ಮೂರು ವರ್ಷಗಳಾದರೂ ಉದ್ಯೋಗ ದೊರೆಯದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದಕ್ಕಾಗಿ ‘ಯುವಸ್ನೇಹಿ’ ಯೋಜನೆ ಅಡಿ ಒಂದು ಬಾರಿಯ ಆರ್ಥಿಕ ನೆರವಾಗಿ 2,000 ರೂ. ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇನ್ನು ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿಧ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದವರಿಗೆ ಐಐಟಿಯಲ್ಲಿ ಮೂರು ತಿಂಗಳ ವೃತ್ತಿಪರ ತರಬೇತಿ ಪಡೆಯಲು ಮೂರು ತಿಂಗಳ ಕಾಲ ಮಾಸಿಕ 1,500 ರೂ. ಶಿಷ್ಯವೇತನ ನೀಡಲಾಗುವುದು. ತರಬೇತಿ ಪೂರ್ಣಗೊಂಡವರಿಗೆ ಅಪ್ರೈಂಟಿಸ್​​ಶಿಪ್ ಕಾರ್ಯಕ್ರಮದಡಿ 3 ತಿಂಗಳು 1,500 ರೂ. ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

Key words: CM Bommai –announced- ‘Yuvasnehi’ scheme -unemployed -youth.

website developers in mysore