ದೇಗುಲ ತೆರವು ವಿಚಾರ: ಹೋರಾಟ ಕೈ ಬಿಡುವಂತೆ ಹಿಂದೂ ಜಾಗರಣಾ ವೇದಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ.

ಮೈಸೂರು,ಸೆಪ್ಟಂಬರ್,28,2021(www.justkannada.in): ದೇಗುಲ ತೆರವು ವಿರೋಧಿಸಿ ನಡೆಸುತ್ತಿರುವ  ಹೋರಾಟವನ್ನ ಕೈಬಿಡುವಂತೆ ಹಿಂದೂ ಜಾಗರಣಾ ವೇದಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ ಮಾಡಿದರು.

ಮೈಸೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಇಂದು ಹಿಂದೂ ಜಾಗರಣಾ ವೇದಿಕೆಯ ಸಭೆ  ಆಗಮಿಸಿ ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಜಗದೀಶ್ ಕಾರಂತ್ ಅವರನ್ನ ಭೇಟಿ ಮಾಡಿ ಮಾತನಾಡಿದರು.

ಇದು ನಿಮ್ಮದೇ ಸರ್ಕಾರ. ನಿಮ್ಮ ಮಾರ್ಗದರ್ಶನದಲ್ಲಿ ಸರ್ಕಾರ ನಡೆದುಕೊಳ್ಳುತ್ತೆ. ಸುಪ್ರೀಂಕೋರ್ಟ್ ತೀರ್ಪನ್ನು ತಪ್ಪಾಗಿ ಗ್ರಹಿಸಿ ದೇವಾಲಯ ತೆರವು ಮಾಡಲಾಗಿದೆ. ಇದರ ಹಿನ್ನೆಲೆ ಬಗ್ಗೆ ನನಗೆ ಮಾಹಿತಿ ಇದೆ. ಸರ್ಕಾರ ದೇವಾಲಯ ತೆರವು ವಿಚಾರ ವಿಧಾನಸಭೆಯಲ್ಲೂ ಚರ್ಚೆ ನಡೆದಿದ್ದು,  ಈಗಾಗಲೇ ದೇವಾಲಯಗಳ ಸಂರಕ್ಷಣೆಗೆ ಕಾಯ್ದೆ ರೂಪಿಸಲಾಗಿದೆ. ಇಷ್ಟು ತ್ವರಿತವಾಗಿ ವಿಧೇಯಕ ಜಾರಿಗೆ ತಂದ ಉದಾಹರಣೆಯೇ ಇಲ್ಲ. ವಿಧೇಯಕದಲ್ಲಿ ಲೋಪದೋಷಗಳಿವೆ ಅನ್ನುವುದರ ಅರಿವು ಇದೆ. ಪೂರಕ ಕಾನೂನು ರಚಿಸುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದ್ದರಿಂದ ನಿಮ್ಮ ಹೋರಾಟ ಕೈಬಿಡಿ ಅಂತ ನಾನು ಮನವಿ ಮಾಡುತ್ತೇನೆ. ಎಂದು ಹಿಂದೂ ಜಾಗರಣ ವೇದಿಕೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮನವಿ ಮಾಡಿದರು.

Key words: Clearing –Temple-Home Minister- Arag Ganendra -appeals –mysore- Hindu jagarana vedike