ಧಾರ್ಮಿಕ ಸ್ಥಳಗಳ ತೆರವು ವಿಚಾರ: ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ಧ ಪ್ರತಾಪಸಿಂಹಗೆ ಆರ್.ಧೃವನಾರಾಯಣ್ ತಿರುಗೇಟು.

ಮೈಸೂರು,ಸೆಪ್ಟಂಬರ್,18,2021(www.justkannada.in): ಧಾರ್ಮಿಕ ಸ್ಥಳಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ  ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ಧ  ಸಂಸದ ಪ್ರತಾಪಸಿಂಹಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಆರ್.ಧೃವನಾರಾಯಣ್,  ಸಿದ್ಧರಾಮಯ್ಯ ವಿರುದ್ಧ ಸಂಸದ ಪ್ರತಾಪಸಿಂಹ ಹೇಳಿಕೆ ಬಾಲಿಷವಾದ್ದದ್ದು. ಹಿಂದೂ ಧರ್ಮವನ್ನು ನಾವು ಗುತ್ತಿಗೆ ಪಡೆದಿದ್ದೇವೆ ಅನ್ನೋ ಹಿನ್ನೆಲೆಯಲ್ಲಿ ಲಘುವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ. ಹಿಂದೂ ಧರ್ಮ ನಿಮ್ಮ ಸ್ವತ್ತಲ್ಲ ಎಂದು ಕಿಡಿಕಾರಿದರು.

ದೇವಾಲಯದ ಆದೇಶ ಕೊಟ್ಟಿರುವುದು ಸಿಎಸ್. ಸಿಎಸ್ ಏನೇ ಆದೇಶ ಹೊರಡಿಸಿದರೂ ರಾಜ್ಯ ಸರ್ಕಾರದ ನಿಲುವು ಧರ್ಮವನ್ನು ರಾಜಕಾರಣಕ್ಕೆ ತರಬಾರದು. ಅದು ನಮ್ಮ ಮನೆಯಲ್ಲಿ ಆಚರಣೆಯಾಗಬೇಕು. ಆದರೆ ಬಿಜೆಪಿಯವರು ಸದಾ ಇದನ್ನು ರಾಜಕೀಯವಾಗಿ ಬಳಸುತ್ತಾರೆ. ದೇಗಲು ತೆರವು ಮಾಡಿರುವುದು ಸರಿಯಲ್ಲ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬಹುದಾಗಿತ್ತು. ಆ ರೀತಿ ಪ್ರಯತ್ನ ಇಲ್ಲಿ ನಡೆದಿಲ್ಲ. ಧರ್ಮಾತೀತವಾಗಿ ರಾಜಕಾರಣ ಮಾಡುವುದನ್ನು ಬಿಡಿ ಎಂದು ಆರ್.ಧೃವನಾರಾಯಣ್ ಗುಡುಗಿದರು.

ಆಡಳಿತ ಮಾಡುವುದರಲ್ಲಿ ಬಿಜೆಪಿ ವಿಫಲವಾಗಿದೆ. ಸಿದ್ದರಾಮಯ್ಯ ಇದ್ದಾಗ ಈ ರೀತಿ ಆದೇಶ ಮಾಡಿಲ್ಲ. ಸಿದ್ದರಾಮಯ್ಯ ಯಾವುದೇ ದೇಗುಲ ಒಡೆಸಿಲ್ಲ. ಧರ್ಮವನ್ನೇ ನಮ್ಮದು ಅನ್ನುವವರು ದೇವಸ್ಥಾನ ಒಡೆಸಿದ್ದಾರೆ. ಬಿಜೆಪಿಯವರಿಗೆ ಅನುಭವದ ಕೊರತೆಯಿದೆ. ಸರ್ಕಾರದ್ದೆ ಲೋಪ ಇದೆ ಸರ್ಕಾರ ಆದೇಶ ಕೊಟ್ಟಿದೆ. ಆದರೆ ತಹಶೀಲ್ದಾರ್ ಮೇಲೆ ಕ್ರಮ ಸರಿಯಲ್ಲ ಎಂದು ಆರ್.ದೃವನಾರಾಯಣ್ ಆಕ್ಷೇಪಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರ ತಜ್ಞರ ತಂಡ ಸಹ ಸಮರ್ಪಕವಾಗಿರಲಿಲ್ಲ. ತಂಡ ಪಕ್ಷಾತೀತಾವಾಗಿ ಇರಲಿಲ್ಲ ಆರ್ ಎಸ್ ಎಸ್‌ನಲ್ಲಿ ಸಕ್ರಿಯವಾಗಿದ್ದವರು ಸಮಿತಿಯಲ್ಲಿದ್ದಾರೆ. ಭ್ರಷ್ಟಾಚಾರದ ಆರೋಪದಲ್ಲಿದ್ದವರು ಇದ್ದಾರೆ. ಕಸ್ತೂರಿ ರಂಗನ್ ಅವರನ್ನು ಬಿಟ್ಟರೆ ಬೇರೆ ಯಾರು ಸರಿಯಿಲ್ಲ. ಕಸ್ತೂರಿ ರಂಗನ್ ಅವರ ಬಗ್ಗೆ ಅಪಾರ ಗೌರವವಿದೆ. ಅವರಿಗೂ ಮುಕ್ತವಾಗಿ ಕೆಲಸ ಮಾಡಲು ಬಿಟ್ಟಿಲ್ಲ. ಸಂವಿಧಾನದ ಆಶಯದಂತೆಯೂ ಇದು ಆಗಿಲ್ಲ. ಹಳೆ ಪದ್ದತಿ ನಿಜಕ್ಕೂ ಉತ್ತಮವಾಗಿದೆ ಎಂದರು.

ಯುಜಿಸಿ  ಸ್ಕೇಲ್ ಹೆಚ್ಚು ಮಾಡಿದ್ದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್. ಹೊಸ ಶಿಕ್ಷಣ ನೀತಿಯಲ್ಲಿ ಸಾಕಷ್ಟು ನ್ಯೂನ್ಯತೆ ಇದೆ. ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ಇಲ್ಲದೆ ಇರುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲವಾಗಲಿದೆ. ಮತ್ತೊಂದು ಶಿಕ್ಷಣ ತಜ್ಞರ ಸಮಿತಿ‌ ಮಾಡಬೇಕು. ಶಿಕ್ಷಣ ನೀತಿಯನ್ನು ಧರ್ಮದ ಆಧಾರಿತವಾಗಿ ಮಾಡುವುದಕ್ಕೆ ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದರು.

Key words: Clearing – religious places-R. Dhruvanarayan – Pratap simha- Siddaramaiah.