ಸ್ವಚ್ಛತೆ ಬಗ್ಗೆ ಕಾಳಜಿ: ಹಳೇ ಚಪ್ಪಲಿ ತುಂಬಿದ್ದ ಚೀಲ ಎತ್ತಿ ಅಧಿಕಾರಿ ಕೈಗೆ ಕೊಟ್ಟ ಸಚಿವ ವಿ.ಸೋಮಣ್ಣ

ಮೈಸೂರು,ಸೆ,21,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ನಡುವೆ ದಸರೆ ಸಮೀಪಿಸುತ್ತಿದ್ದಂತೆ ಚುರುಕಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಚಾಮುಂಡಿಬೆಟ್ಟದಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿದ್ದಾರೆ.

ಹೌದು, ಇಂದು ಚಾಮುಂಡಿ ಬೆಟ್ಟದಲ್ಲಿ ಸಚಿವ ವಿ.ಸೊಮಣ್ಣ ಸ್ವಚ್ಛತೆ ಪರಿಶೀಲನೆ ನಡೆಸುತ್ತಾ ಸಾಗಿದಾಗ ಸೋಮಣ್ಣ ಅವರ ಕಣ್ಣಿಗೆ ಹಳೇ ಚಪ್ಪಲಿ ತುಂಬಿದ ಚೀಲ ಕಂಡಿದೆ. ಈ ವೇಳೆ   ಸಚಿವ ಸೋಮಣ್ಣ ಮೆಟ್ಟಿಲು ಪಕ್ಕದಲ್ಲೇ ಚಪ್ಪಲಿ ತುಂಬಿದ ಚೀಲವನ್ನ ತಾವೇ ತೆಗೆದು ಅಧಿಕಾರಿ ಕೈಗೆ ಕೊಟ್ಟಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಸ್ವಚ್ಛತೆ ಪರಿಶೀಲನೆ ವೇಳೆ  ಈ ಘಟನೆ ನಡೆದಿದೆ. ಅಲ್ಲದೆ ಮೆಟ್ಟಿಲುಗಳ ಬಳಿ ಬಿದ್ದಿದ್ದ ಕಸವನ್ನೂ ಸಹ ಸೋಮಣ್ಣ  ತೆಗೆದು ಸಿಬ್ಬಂದಿಗಳ ಕೈಗೆ ಕೊಟ್ಟಿದ್ದಾರೆ.  ನಂತರ ಸಚಿವ ವಿ.ಸೋಮಣ್ಣ  ಚಾಮುಂಡಿಬೆಟ್ಟದಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Key words: cleanliness- Minister -V. Somanna -bag – old slippers – officer-mysore- chamundi hills