ಕುಟುಂಬ ಸದಸ್ಯರೊಂದಿಗೆ ಮನೆ ಮನೆ ಕಸ ಸಂಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದ 61ನೇ ವಾರ್ಡ್ ಸದಸ್ಯೆ

ಮೈಸೂರು, ಮಾರ್ಚ್ 01, 2020 (www.justkannada.in): ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ವಾರ್ಡ್ ನ ಸ್ವಚ್ಚತೆ ಕಾಪಾಡಲು ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಇಂದು ಪಾಲಿಕೆ ಸದಸ್ಯೆ ಪ್ರತಿಭಟನೆ ನಡೆಸಿದರು.

ವಾರ್ಡ್ ನಂ 61 ರ ಪಾಲಿಕೆ ಸದಸ್ಯೆ ಶೋಭಾ ಸುನೀಲ್‌ ಕುಟುಂಬಸ್ಥರಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಕುಟುಂಬ ಸಮೇತ ಮನೆ ಮನೆ ತೆರಳಿ ಕಸ ಸಂಗ್ರಹಿಸಿ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ರು ಪ್ರಯೋಜನ ಆಗಿಲ್ಲ. 700 ಜನಕ್ಕೆ ಒಬ್ಬ ಪೌರಕಾರ್ಮಿಕನನ್ನ ಪಾಲಿಕೆಯಿಂದ ನೀಡಿದ್ದಾರೆ. ಒಂದು ವಾರ್ಡ್ ಗೆ 25 ಜನ ಪೌರಕಾರ್ಮಿಕರನ್ನ ನೀಡಿದ್ದಾರೆ. ಇದರಲ್ಲಿ‌ 5 ಜನ ಮೃತಪಟ್ಟಿದ್ದರೆ, ಕೆಲವರಿಗೆ ಆರೋಗ್ಯ ಸರಿಯಿಲ್ಲದೆ ಕೆಲಸಕ್ಕೆ ಬರ್ತಾ ಇಲ್ಲ. ವಾರ್ಡ್ ನಲ್ಲಿ ಜನರಿಗೆ ಉತ್ತರ ನೀಡಲು ಆಗ್ತಾ ಇಲ್ಲ ಎಂದು ಶೋಭಾ ಸುನೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದಲ್ಲಿ ಆಯುಕ್ತರ ಕಚೆರಿಗೆ ಮುತ್ತಿಗೆ ಹಾಕುತ್ತೇವೆ‌ ಎಂದು ಎಚ್ಚರಿಸಿದರು.