ಸಿನಿಮಾ, ಧಾರವಾಹಿ ಶೂಟಿಂಗ್: ಮಾರ್ಗಸೂಚಿ ಬಿಡುಗಡೆ ಮಾಡಿದ ಪ್ರೊಡ್ಯೂಸರ್ಸ್ ಗಿಲ್ಡ್ ಇಂಡಿಯಾ………

ಬೆಂಗಳೂರು,ಮಾ,28,2020(www.justkannada.in):   ಕೊರೋನಾ ಲಾಕ್ ಡೌನ್ ಸಡಿಲಿಕೆಯಾದ ನಂತರ ಧಾರವಾಹಿ ಶೂಟಿಂಗ್ ಗೆ ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಪ್ರೊಡ್ಯೂಸರ್ಸ್ ಗಿಲ್ಡ್ ಇಂಡಿಯಾ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಟಿವಿ ಧಾರವಾಹಿ ಮತ್ತು ಸಿನಿಮಾ, ಶೂಟಿಂಗ್ ವೇಳೆ ಹೊಸ ಗೈಡ್ ಲೈನ್ಸ್ ಅಳವಡಿಸಿಕೊಳ್ಳುವಂತೆ  ಪ್ರೊಡ್ಯೂಸರ್ಸ್ ಗಿಲ್ಡ್ ಇಂಡಿಯಾ ಸೂಚನೆ ನೀಡಿದೆ.  ಶೂಟಿಂಗ್ ವೇಳೆ ಮಾಸ್ಕ್ ಕಡ್ಡಾಯ, ಶೂಟಿಂಗ್ ವೇಳೆ ಎರಡು ಮೀಟರ್ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಬೇಕು. 60 ವರ್ಷ ಮೇಲ್ಪಟ್ಟವರು ಶೂಟಿಂಗ್ ನಲ್ಲಿ ಭಾಗಿಯಾಗಬಾರದು.  ಹಾಗೆಯೇ ಸೆಟ್ ಮತ್ತು ಸ್ಟುಡಿಯೋದಲ್ಲಿ  ಯಾರೂ ಸಿಗರೇಟ್ ಸೇದುವಂತಿಲ್ಲ. ಶೂಟಿಂಗ್ ವೇಳೆ ಅಪ್ಪಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದೆ.

Key words: Cinema- serial –shooting-Producers- Guild- India