ಸಿಐಡಿ ನೋಟೀಸ್ ರಾಜಕೀಯ ಪ್ರೇರಿತ: ವಿಧಾನ ಸೌಧ ವ್ಯಾಪಾರಸೌಧ ಆಗಿದೆ- ಪ್ರಿಯಾಂಕ್ ಖರ್ಗೆ ಟೀಕೆ.

Promotion

ಬೆಂಗಳೂರು,ಮೇ,7,2022(www.justkannada.in):  ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನನಗೆ ನೋಟೀಸ್ ನೀಡಿರುವುದು ರಾಜಕೀಯ ಪ್ರೇರಿತ. ಸಿಐಡಿ ಕೊಟ್ಟ ನೋಟೀಸ್ ಗೆ ಉತ್ತರ ಕೊಟ್ಟಿದ್ದೇನೆ ಎಂದು ಕಾಂಗ್ರೆಸ್ ಶಾಸಕತ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಪ್ರಕರಣ ಕುರಿತು ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ. ಎಲ್ಲಾ ಪರೀಕ್ಷೆಗಳಲ್ಲೂ ಅಕ್ರಮ ನಡೆದಿದೆ. ಸರ್ಕಾರ ನಡೆಸುತ್ತಿರುವುದು ಬಸವರಾಜ ಬೊಮ್ಮಾಯಿ ಅಲ್ಲ  ಕೇಶವ ಕೃಪಾದಿಂದ ಸರ್ಕಾರ ನಡೆಯುತ್ತಿದೆ. ಬಿಜೆಪಿ ಸರ್ಕಾರ ಪರ್ಸೆಂಟೇಜ್ ಸರ್ಕಾರ. ವಿಧಾನಸೌಧ ವ್ಯಾಪಾರಸೌಧ ಆಗಿದೆ ಎಂದು ಟೀಕಿಸಿದರು.

ಇನ್ನು  ಪಿಎಸ್ ಐ ಹಗರಣದ ಬಗ್ಗೆ  ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಆಗ್ರಹಿಸಿದ ಪ್ರಿಯಾಂಕ್ ಖರ್ಗೆ, ಸಾರ್ವಜನಿಕರ ಪರ ನ್ಯಾಯ ಕೇಳೋದು ತಪ್ಪಾ ಎಂದು ಪ್ರಶ್ನಿಸಿದರು.

Key words: CID-notice-politically-motivated-MLA-Priyank Kharge