ಎಲ್ಲೆಡೆ ಕ್ರಿಸ್ ಮಸ್ ಸಂಭ್ರಮಾಚರಣೆ: ಗಣ್ಯರಿಂದ ಶುಭಾಶಯ

Promotion

ಬೆಂಗಳೂರು, ಡಿಸೆಂಬರ್ 25, 2022 (www.justkannada.in): ಇಂದು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಸಂಭ್ರಮದಿಂದ ಕ್ರಿಸ್ ಮಸ್ ಆಚರಣೆ ಮಾಡಲಾಗುತ್ತಿದೆ.

ವಿಶ್ವದೆಲ್ಲೆಡೆ ಡಿ.24ರ ಮಧ್ಯರಾತ್ರಿಯಿಂದಲೇ ಕ್ರಿಸ್‌ಮಸ್ ಸಂಭ್ರಮ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯ ಕೋರಿದ್ದಾರೆ.

“ಈ ವಿಶೇಷ ದಿನ ನಮ್ಮ ಸಮಾಜದಲ್ಲಿ ಸಾಮರಸ್ಯ ಮತ್ತು ಸಂತೋಷದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ. ಭಗವಂತ ಕ್ರಿಸ್ತನ ಉದಾತ್ತ ಚಿಂತನೆಗಳನ್ನು ಆದರ್ಶವಾಗಿಟ್ಟುಕೊಂಡು ಸಮಾಜಕ್ಕೆ ಸೇವೆ ಸಲ್ಲಿಸಲು ಒತ್ತು ನೀಡೋಣ’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಶಾಂತಿಯುತ ಕ್ರಿಸ್‌ಮಸ್‌ ಈವ್ ಆಚರಣೆಗಾಗಿ ನಾವು ನಿಮಗೆ ಶುಭ ಹಾರೈಸುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಟ್ವೀಟ್ ಮಾಡಿದ್ದಾರೆ.