ದುರ್ಗದಲ್ಲಿ ನಾಳೆ ‘ಕಾಯಕ ಜನೋತ್ಸವ’ : ಬಸವ ಮಾಚಿದೇವ ಸ್ವಾಮೀಜಿ

 

ಚಿತ್ರದುರ್ಗ, ಜ.05, 2020 : (www.justkannada.in news ) ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ ಅವರ ಮೂರನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಾಳೆ ‘ಕಾಯಕ ಜನೋತ್ಸವ’ ಆಯೋಜಿಸಲಾಗಿದೆ.

ಮಠದ 12ನೇ ಶಂಕುಸ್ಥಾಪನೆ, ಸ್ವಾಮೀಜಿ ಅವರ 37ನೇ ಜನ್ಮದಿನ ಹಾಗೂ 22ನೇ ಜಂಗಮದೀಕ್ಷೆಯ ಕಾರ್ಯಕ್ರಮಗಳು ‘ಕಾಯಕ ಜನೋತ್ಸವ’ ದಲ್ಲಿ ಜರುಗಲಿವೆ. ಕೋವಿಡ್‌ ಮುಂಜಾಗ್ರತೆಯಿಂದ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಸಮಾರಂಭಕ್ಕೆ ಆಗಮಿಸುವ ಭಕ್ತರು ಮಾಸ್ಕ್‌ ಧರಿಸಿ ಭಾಗವಹಿಸುವಂತೆ ಬಸವ ಮಾಚಿದೇವ ಸ್ವಾಮೀಜಿ ಮನವಿ ಮಾಡಿದ್ದಾರೆ.

jk-logo-justkannada-mysore

‘ಕಾಯಕ ಜನೋತ್ಸವ’ ದಲ್ಲಿ ಮಡಿವಾಳ ಮಾಚಿದೇವರ ಆಧ್ಯಾತ್ಮಿಕ ಮಂದಿರವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸುವರು. ವಚನ ಪಲ್ಲಕ್ಕಿ ಉತ್ಸವಕ್ಕೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೌಟಿಲ್ಯ ಆರ್.ರಘು ಚಾಲನೆ ನೀಡುವರು.

chitradurga-machideva-kayakosthava-raghu-mysore

ಬಸವ ಮಾಚಿದೇವ ಸ್ವಾಮೀಜಿ ಪೀಠಾರೋಹಣ, ವಿಶ್ವ ಆದರ್ಶ ಕುಟುಂಬ ಪ್ರಶಸ್ತಿ ಪ್ರದಾನ, ಮಾಚಿದೇವರ ನಾಟಕ ಗ್ರಂಥ ಬಿಡುಗಡೆ ಸಮಾರಂಭ ಸಹ ಇದೇ ವೇಳೆ ಹಮ್ಮಿಕೊಳ್ಳಲಾಗಿದೆ.
ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.

ooooo

key words : chitradurga-machideva-kayakosthava-raghu-mysore