ಬೃಹತ್ ಟ್ರಂಚ್ ಜಂಪ್ ಮಾಡಿದ ಗಜರಾಜ: ಒಂಟಿ ಸಲಗದ‌ ಸಾಹಸಕ್ಕೆ ತಬ್ಬಿಬ್ಬಾದ ಅರಣ್ಯ ಸಿಬ್ಬಂದಿ….

ಚಿಕ್ಕಮಗಳೂರು,ಡಿ,11,2019(www.justkannada.in): ಸೊಂಡಿಲಿನ ಸಹಾಯದಿಂದ ಬೃಹತ್ ಟ್ರಂಚ್ ಅನ್ನ ಜಂಪ್ ಮಾಡಿದ ಗಜರಾಜ.  ಒಂಟಿಸಲಗದ ಸಾಹಸ ನೋಡಿ ತಬ್ಬಿಬ್ಬಾದ ಅರಣ್ಯ ಇಲಾಖೆ ಸಿಬ್ಬಂದಿ. ಆನೆಯ ಚಾಣಕ್ಯತನಕ್ಕೆ ಫಿದಾ ಆದ ಸ್ಥಳೀಯರು…

ಈ ದೃಶ್ಯ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಹೆಬ್ಬೆ ಅರಣ್ಯ ವಲಯದಲ್ಲಿ. ಹೌದು ಆನೆಯೊಂದು ಅರಣ್ಯ ಇಲಾಖೆ ನಿರ್ಮಿಸಿದ್ದ ಬೃಹತ್  ಟ್ರಂಚ್ ಅನ್ನು ಲೆಕ್ಕಿಸದೇ ಜಂಪ್ ಮಾಡಿ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಗಜರಾಜ ಸೊಂಡಿಲಿನ ಸಹಾಯದಿಂದ ಬೃಹತ್ ಟ್ರಂಚ್ ನ್ನ ಜಂಪ್ ಮಾಡಿದ್ದಾನೆ.

ಸೊಂಡಿಲಿನ‌ ಮೇಲೆ ತನ್ನ ಭಾರವನ್ನು ಬಿಟ್ಟು ಟ್ರಂಚ್ ಜಂಪ್ ಮಾಡಿದ ಆನೆಯ ಚಾಣಕ್ಯತನಕ್ಕೆ  ಇದೀಗ ಸ್ಥಳೀಯರೇ ಅಚ್ಚರಿ ವ್ಯಕ್ತಪಡಿಸಿದರೇ ಒಂಟಿ ಸಲಗನ‌ ಸಾಹಸಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಯೂ ಕೆಲಕಾಲ ತಬ್ಬಿಬ್ಬಾದ ಪ್ರಸಂಗ ಕಂಡು ಬಂದಿದೆ.

ಶಿವಮೊಗ್ಗದಲ್ಲಿ ಮೂರು ಆನೆಗಳು ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ..

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಬಂಕಸಾಣ ಗ್ರಾಮದಲ್ಲಿಮೂರು ಆನೆಗಳು ಪ್ರತ್ಯಕ್ಷವಾಗಿ ಭಯದ ವಾತಾವರಣ ಸೃಷ್ಠಿಸಿವೆ. ವರದಾ ನದಿಯ ದಂಡೆಯಲ್ಲಿ ಆನೆಗಳು ಕಾಣಿಸಿಕೊಂಡಿದ್ದು ಸುತ್ತಲಿನ ಗ್ರಾಮಗಳಲ್ಲಿನ  ಜನರಲ್ಲಿ ಆತಂಕ ಮನೆ ಮಾಡಿದೆ. ಆನೆಗಳ ಸೆರೆಗೆ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದಿದ್ದಾರೆ.

Key words: chikkamagalur-shivamogga-elephant-forest department