ಪ್ರವಾಹದಿಂದ ತಮ್ಮನ್ನು ರಕ್ಷಿಸಿದ ಯೋಧರಿಗೆ ರಾಕಿ ಕಟ್ಟಿ ಆರತಿ ಮಾಡಿ ಬೀಳ್ಕೊಟ್ಟ ನೆರೆ ಸಂತ್ರಸ್ತರು…

ಚಿಕ್ಕಮಗಳೂರು,ಆ,13,2019(www.justkannada.in):  ಪ್ರವಾಹದಲ್ಲಿ ಸಿಲುಕಿ ನರಳುತ್ತಿದ್ದ ಜನರನ್ನ ತಮ್ಮ ಜೀವವನ್ನ ಪಣಕ್ಕಿಟ್ಟು ರಕ್ಷಿಸಿದ ಯೋಧರಿಗೆ ನೆರೆ ಸಂತ್ರಸ್ತರು ರಾಕಿಕಟ್ಟಿ  ಆರತಿ ಮಾಡಿ ಬೀಳ್ಕೊಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಲೇಖಾನ್ ನಲ್ಲಿನ ಪರಿಹಾರ ಕೇಂದ್ರದ ನೆರೆ ಸಂತ್ರಸ್ತರು ಯೋಧರಿಗೆ ಈ ರೀತಿ ಗೌರವ ಸಲ್ಲಿಸಿದ್ದಾರೆ.  ಭಾರಿ ಮಳೆಯಿಂದಾಗಿ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಸತತ ಗುಡ್ಡ ಕುಸಿತದಿಂದಾಗಿ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ವೇಳೆ ಆಗಮಿಸಿದ್ದ ರಕ್ಷಣಾ ಪಡೆ ಯೋಧರು ಸುಮಾರು 78 ಮಂದಿ ಜನರನ್ನ ರಕ್ಷಣೆ ಮಾಡಿದ್ದರು.

ಜತೆಗೆ ಸ್ವಾಧೀನರಾಗಿದ್ದ ನಾರಾಯಣ್ ಎಂಬುವವರನ್ನ ಸೇನಾತಂಡದ ಯೋಧರು ಹೊತ್ತಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ಸೇರಿಸಿದ್ದರು. ಈ ನಡುವೆ ಇಂದು ರಕ್ಷಣಾ ಪಡೆಯ ಯೋಧರು ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ   ಜೀವದ ಹಂಗು ತೊರೆದು ತಮ್ಮನ್ನ ರಕ್ಷಿಸಿದ ಯೋಧರಿಗೆ ನೆರೆ ಸಂತ್ರಸ್ತರು ರಾಕಿ ಕಟ್ಟಿ ಆರತಿ ಬೆಳಗಿ ಬೀಳ್ಕೊಡುಗೆ ನೀಡಿದರು.

ಈ ಸಮಯದಲ್ಲಿ ಯೋಧರು,  ಭಾರತೀಯ ಸೇನೆ ಸದಾ ನಿಮ್ಮ ಜತೆ ಇರುತ್ತದೆ ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ನಾವು ಸಿದ್ಧ ಎಂದು ಭರವಸೆ ನೀಡಿ ಬೆಂಗಳೂರಿಗೆ ಮಿಲಿಟರಿ ಪಡೆ ಹೊರಟಿತು.

Key words: chikkamagalur Neighboring victims – greeted – Soldiers – rescued -flood