ಈ ಘಟನೆ ನಡೆದು ಇಂದಿಗೆ 10 ವರ್ಷ : ಕೇಶ ಮುಂಡನ ಮಾಡಿಸಿಕೊಂಡು ತಂದೆ ಅಂತಿಮ ಕಾರ್ಯ ನೆರವೇರಿಸಿದ ಮಹಿಳಾಧಿಕಾರಿ

Promotion

ಮೈಸೂರು, ಜೂ.14, 2020 : ( www.justkannada.in news ) : ಮಹಿಳಾ ಅಧಿಕಾರಿಯೊಬ್ಬರು ಮಗನಂತೆ ತಂದೆಯ ಅಂತಿಮ ಕಾರ್ಯ ಮಾಡಿ ರಾಜ್ಯದ ಗಮನ ಸೆಳೆದ ಘಟನೆ ನಡೆದು ಇಂದಿಗೆ 10 ವರ್ಷ. ಮೈಸೂರಿನ ಮುಡಾ ದಲ್ಲಿ ಮುಖ್ಯ ಅಕೌಂಟೆಂಟ್ ಆಗಿದ್ದ ಆ ಮಹಿಳಾಧಿಕಾರಿಯ ಪ್ರಗತಿಪರ ಕಾರ್ಯ ಆಗ ಜನ ಮೆಚ್ಚುಗೆಗೂ ಪಾತ್ರವಾಗಿತ್ತು.

ಇದೀಗ ಈ ಘಟನೆ ನಡೆದು ಹತ್ತು ವರ್ಷ ಕಳೆದಿದೆ. ಹಿಂದಿನ ಈ ಘಟನೆ ಈಗ ನೆನಪಿಸಿಕೊಳ್ಳಲು ಕಾರಣ, ಆ ಮಹಿಳಾ ಅಧಿಕಾರಿಯ ಕುಟುಂಬ ಇಂದು ತಂದೆಯ ಹತ್ತನೇ ವರ್ಷದ ಪುಣ್ಯ ಕಾರ್ಯ ನೆರವೆರಿಸಿದ್ದು. ಮೈಸೂರು ಸಮೀಪದ ಬೆಳಗೊಳದಲ್ಲಿ ತಂದೆ-ತಾಯಿಯ ಪ್ರತಿಮೆಗೆ ಸಹೋದರಿಯರ ಜತೆ ಕುಟುಂಬದವರು ಪೂಜೆ ನೆರವೇರಿಸಿ 10 ನೇ ವರ್ಷದ ಕಾರ್ಯ ನೆರವೇರಿಸಿದರು.

Chief Accountant B G Indramma- KAS officer- Govindegowda - Belagola village- performed the last rites-mysore

ಘಟನೆ ಹಿನ್ನೆಲೆ :

ಕೆಎಎಸ್ ಅಧಿಕಾರಿ ಬಿ ಜಿ ಇಂದ್ರಮ್ಮ, ಮೈಸೂರು ಸಮೀಪದ ಬೆಳಗೊಳ ಗ್ರಾಮದ ಗೋವಿಂದೆಗೌಡರ ನಾಲ್ಕನೇ ಮಗಳು. ಗಂಡು ಮಕ್ಕಳಿಲ್ಲದ ಕಾರಣ, ತಂದೆ ಮೃತಪಟ್ಟಾಗ ಇಂದಿರಮ್ಮ ಅವರೇ ಮುಂದೆ ನಿಂತು ಗಂಡು ಮಗನಂತೆಯೇ ಎಲ್ಲಾ ವಿಧಿ-ವಿಧಾನಗಳನ್ನು ಅಂದು ನೆರೆವೆರಿಸಿದ್ದರು.

ಶ್ರೀರಂಗಪಟ್ಟಣ ಸಮೀಪದ ಪಶ್ವಿಮ ವಾಹಿನಿಯಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದ್ದಲ್ಲದೆ, ಸಂಪ್ರದಾಯದ ಪ್ರಕಾರ 11 ನೇ ದಿನ ಮುಡಿ ತೆಗೆಸಿದರು. ಈ ಬಗ್ಗೆ ಪ್ರಶ್ನಿಸಿದಾಗ, “ನಾವು ನಮ್ಮ ಹೆತ್ತವರಿಗೆ ಐದು ಹೆಣ್ಣುಮಕ್ಕಳು . ನಾವು ಹೆತ್ತವರಿಗೆ ಗೌರವ ತೋರಿಸುವುದು ನಮ್ಮ ಕರ್ತವ್ಯ. ಹಾಗಾಗಿ ಅಂತಿಮ ವಿಧಿವಿಧಾನ ನೆರವೇರಿಸಿದರೆ ಅದರಲ್ಲಿ ಏನು ತಪ್ಪು ..?ಎಂದು ಆಗ ಪ್ರಶ್ನಿಸಿದ್ದದ್ದನ್ನು ಇಂದಿರಮ್ಮ ಸ್ಮರಿಸಿಕೊಂಡು, ತಂದೆಯ ಚಿತಾಭಸ್ಮವನ್ನು ಕಾವೇರಿ ನದಿಯಲ್ಲಿ ಬಿಡುಗಡೆ ಮಾಡಿ, ಅಂತಿಮ ವಿಧಿಗಳನ್ನು ನಿರ್ವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ . ಕೆಲವು ಸಂಬಂಧಿಕರು ಈ ನನ್ನ ನಿರ್ಧಾರವನ್ನು ಬೆಂಬಲಿಸಿದರೆ, ಇತರರು ವಿವಾಹಿತ ಮಹಿಳೆ ಕೇಶ ಮುಂಡನ ಮಾಡಿಸುವುದು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬುದು ಇಂದಿರಮ್ಮ ನೆನಪಿಸಿಕೊಂಡರು.

 Chief Accountant B G Indramma-  KAS officer-  Govindegowda -  Belagola village-  performed the last rites-mysore

ಬೆಳಗೊಳ ಗ್ರಾಮದ ಸ್ವಗೃಹದಲ್ಲಿ ಇಂದು ತಂದೆ ಗೋವಿಂದೇಗೌಡರ ಹತ್ತನೇ ವರ್ಷದ ಪುಣ್ಯಕಾರ್ಯ ನೆರವೇರಿಸಿದರು. ಈ ವೇಳೆ ಸಹೋದರಿಯರು, ಕುಟುಂಬದವರು ಜತೆಗಿದ್ದರು. ಪೋಷಕರ ನೆನಪಿನಾರ್ಥ ಮನೆ ಅಂಗಳದಲ್ಲೇ ಪ್ರತಿಮೆ ಸ್ಥಾಪಿಸಿರುವ ಇಂದ್ರಮ್ಮ,ಆ ಪ್ರತಿಮೆಗೆ ಪೂಜೆ ಸಲ್ಲಿಸಿ ತಂದೆ-ತಾಯಿ ಸ್ಮರಿಸಿಕೊಂಡರು.

 

ooooo

key words : Chief Accountant B G Indramma- KAS officer- Govindegowda – Belagola village- performed the last rites-mysore