ಖಾಸಗಿ ಕಾರ್ಖಾನೆಯ ರಾಸಾಯನಿಕ ಬಾಯ್ಲರ್ ಸ್ಟೋಟ: ಸರ್ಕಾರಿ ಶಾಲೆಯ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ.

ಹೊಸೂರು,ಅಕ್ಟೋಬರ್,14,2022(www.justkannada.in): ಖಾಸಗಿ ಕಾರ್ಖಾನೆಯ ರಾಸಾಯನಿಕ ಬಾಯ್ಲರ್ ಸ್ಟೋಟಗೊಂಡ ಪರಿಣಾಮ  ಸರ್ಕಾರಿ ಶಾಲೆಯ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ.ರಾದ ಘಟನೆ ಹೊಸೂರಿನಲ್ಲಿ ನಡೆದಿದೆ.

ತಮಿಳನಾಡು ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಹೊಸೂರು ಪಟ್ಟಣದಲ್ಲಿ ಖಾಸಗಿ ಕಾರ್ಖಾನೆಯ ರಾಸಾಯನಿಕ ಬಾಯ್ಲರ್​ ಸ್ಪೋಟ್​ಗೊಂಡ ಪರಿಣಾಮ ರಾಸಯನಿಕ ಸೋರಿಕೆಯಾಗಿದೆ. ರಾಸಾಯನಿಕ ಸೋರಿಕೆಯಾದ ಪರಿಣಾಮ ಉಸಿರಾಟ ತೊಂದರೆಯಾಗಿ 150ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರ್ಖಾನೆಯ ಮುಂಭಾಗದಲ್ಲಿರುವ ಕಾರ್ಪೋರೇಷನ್ ಶಾಲೆಯ 150ಕ್ಕೂ ಹೆಚ್ಚಿನ ಮಕ್ಕಳು ಉಸಿರಾಟ ತೊಂದರೆಗೊಳಗಾಗಿದ್ದು, ಕೂಡಲೆ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟ ಸಮಸ್ಯೆಯಿಂದ ಒದ್ದಾಡಿದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Key words: Chemical -boiler – private factory-150 children – sick.