ಸಮಗ್ರವಾಗಿ ಪರಿಶೀಲಿಸಿ ಕಟ್ಟುನಿಟ್ಟಿನ ಗೈಡ್ ಲೈನ್ ಬಿಡುಗಡೆ- ಸಚಿವ ಆರ್. ಅಶೋಕ್……

kannada t-shirts

ಬೆಂಗಳೂರು,ಏಪ್ರಿಲ್,26,2021(www.justkannada.in):  ರಾಜ್ಯದಲ್ಲಿ ಕೊರೋನಾ ತಡೆಗಾಗಿ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಘೋಷಣೆ ಮಾಡಿದ್ದು ಈ ನಡುವೆ ಸಮಗ್ರವಾಗಿ ಪರಿಶೀಲಿಸಿ ಕಟ್ಟುನಿಟ್ಟಿನ ಗೈಡ್ ಲೈನ್ ಬಿಡುಗಡೆ ಮಾಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.jk

ಇಂದು ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್,  ಟಫ್ ರೂಲ್ಸ್ ಜಾರಿ ಮಾಡಿದರೇ  ಕೊರೋನಾ ನಿಯಂತ್ರಣ ಸಾಧ್ಯ. ಇದು ಲಾಕ್ ಡೌನ್ ಅಲ್ಲದಿದ್ದರೂ ಟಫ್ ರೂಲ್ಸ್ ಜಾರಿ. ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಲಾಗುತ್ತದೆ. ಆರೋಗ್ಯ ಇಲಾಖೆ, ಕಂದಾಯ ಇಲಾಖೆ , ಗೃಹ ಇಲಾಖೆ ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಕಟ್ಟಡ ಕಾಮಗಾರಿ, ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತದೆ. ಆದರೇ ಗಾರ್ಮೆಂಟ್ಸ್ ಓಪನ್ ಇರುವುದಿಲ್ಲ ಎಂದರು.check-out-comprehensive-guide-line-release-tough-rules-minister-r-ashok

ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

Key words: Check out – Comprehensive- Guide Line- Release- Tough Rules-Minister- R. Ashok.

website developers in mysore