ಬಿಜೆಪಿಯೇತರ ಆಡಳಿತ ಇರುವ ದೇಶದ 12 ರಾಜ್ಯಗಳ ರಾಜ್ಯಪಾಲರ ಬದಲಾವಣೆ

kannada t-shirts

ಬೆಂಗಳೂರು, ಫೆಬ್ರವರಿ 12, 2023 (www.justkannada.in): ಬಿಜೆಪಿಯೇತರ ಆಡಳಿತ ಇರುವ ದೇಶದ 12 ರಾಜ್ಯಗಳ ರಾಜ್ಯಪಾಲರನ್ನು ಬದಲಾವಣೆ ಮಾಡಲಾಗಿದೆ.

ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ನಾಲ್ವರು ನಾಯಕರು, ಸುಪ್ರೀಂಕೋರ್ಟ್‍ನ ಒಬ್ಬರು ನಿವೃತ್ತ ನ್ಯಾಯಮೂರ್ತಿಗಳಿಗೆ ಅವಕಾಶ ನೀಡಲಾಗಿದೆ.

ಅಯೋಧ್ಯೆ ಕುರಿತು ತೀರ್ಪು ನೀಡಿದ ಸುಪ್ರೀಂಕೋರ್ಟ್ ವಿಭಾಗೀಯ ಪೀಠದಲ್ಲಿದ್ದ ಅಬ್ದುಲ್ ನಜೀರ್ ಅವರನ್ನು ಅವರ ತವರು ರಾಜ್ಯ ಆಂಧ್ರ ಪ್ರದೇಶಕ್ಕೆ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಬಿಜೆಪಿಯ ಸಿ.ಪಿ.ರಾಧಾಕೃಷ್ಣನ್, ಶಿವ್‍ಪ್ರತಾಪ್ ಶುಕ್ಲಾ, ರಾಜಸ್ಥಾನದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಬ್ ಚಾಂದ್ ಕಠಾರಿಯಾರಿಗೆ ಮಣೆ ಹಾಕಲಾಗಿದೆ. ಅರುಣಾಚಲಪ್ರದೇಶ ಮತ್ತು ಜಾರ್ಖಾಂಡ್ ರಾಜ್ಯಪಾಲರನ್ನು ವರ್ಗಾವಣೆ ಮಾಡಲಾಗಿದೆ.

ರಾಜ್ಯಪಾಲರ ಬದಲಾವಣೆಯಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ, ಸಿಕ್ಕಿಂ, ಅರುಣಾಚಲಪ್ರದೇಶಗಳಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರಗಳಿವೆ.ಅಸ್ಸಾಂನಲ್ಲಿ ಬಿಜೆಪಿ ಆಡಳಿತ ಇದೆ. ಉಳಿದಂತೆ ಬಿಜೆಪಿಯೇತರ ಸರ್ಕಾರಗಳಿವೆ.

ಕರ್ನಾಟಕ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಯಾಗಿ ಕೆಲಸ ಮಾಡಿ, ನಂತರ ಸುಪ್ರೀಂಕೋರ್ಟ್‍ಗೆ ಬಡ್ತಿ ಪಡೆದಿದ್ದ ಆಂಧ್ರ ಪ್ರದೇಶದ ನ್ಯಾಯಮೂರ್ತಿ ಅಬ್ದುಲ್ ನಜೀರ್‍ರನ್ನು ಆಂಧ್ರದ ರಾಜ್ಯಪಾಲರಾಗಿ ನೇಮಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಬೆಳಗ್ಗೆ ರಾಜ್ಯಪಾಲರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ರಾಜುಪಾಲರ ಪಟ್ಟಿ ಹೀಗಿದೆ:
ಅರುಣಾಚಲ ಪ್ರದೇಶ: ನಿವೃತ್ತ ಲೆಫಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ ಪರ್ಣಿಕ್
ಸಿಕ್ಕಿಂ: ಲಕ್ಷ್ಮಣ್ ಪ್ರಸಾದ್ ಆಚಾರ್ಯ
ಜಾರ್ಖಂಡ್: ಸಿ.ಪಿ. ರಾಧಾಕೃಷ್ಣನ್
ಹಿಮಾಚಲಪ್ರದೇಶ: ಶಿವಪ್ರತಾಪ್ ಶುಕ್ಲಾ
ಅಸ್ಸಾಂ: ಗುಲಾಬ್ ಚಂದ್ ಕಟಾರಿಯಾ
ಆಂಧ್ರ ಪ್ರದೇಶ: ಅಬ್ದುಲ್ ನಜೀರ್
ಛತ್ತೀಸ್‍ಗಡ: ಬಿಸ್ವ ಭೂಸನ್ ಹರಿಚಂದನ್
ಮಣಿಪುರ: ಅನುಸೂಯ ಊಕ್ಯೆ
ನಾಗಾಲ್ಯಾಂಡ್: ಲಾ ಗಣೇಶನ್
ಮೇಘಾಲಯ: ಫಾಗು ಚೌಹಾಣ್
ಬಿಹಾರ: ರಾಜೇಂದ್ರ ವಿಶ್ವನಾಥ್ ಅರ್ಲೇಕರ್
ಮಹಾರಾಷ್ಟ್ರ ರಾಜ್ಯಪಾಲ: ರಮೇಶ್ ಬೈಸ್
ಲಡಾಕ್: ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ

website developers in mysore