ಚಾಮುಂಡೇಶ್ವರಿ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ ಚಾಲನೆ

ಮೈಸೂರು,ಅಕ್ಟೋಬರ್,29,2020(www.justkannada.in) : ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ರಥ ಎಳೆದು ಚಾಮುಂಡೇಶ್ವರಿ ರಥೋತ್ಸವಕ್ಕೆ ಚಾಲನೆ ನೀಡಿದರು.jk-logo-justkannada-logo

ದೊಡ್ಡ ರಥದ ಬದಲು ಚಿಕ್ಕ ತೇರಿನಲ್ಲಿ ಮೆರವಣಿಗೆ ನಡೆಸಲಾಯಿತು. ಚಾಮುಂಡೇಶ್ವರಿಗೆ ಯದುವೀರ್ ಪುಷ್ಪಾರ್ಚನೆ ಮಾಡಿ ಚಾಮುಂಡೇಶ್ವರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್,ಎಲ್.ನಾಗೇಂದ್ರ ಭಾಗಿಯಾಗಿದ್ದರು.

ಅತ್ಯಂತ ಸರಳವಾಗಿ ಜಾತ್ರೆ ಆಚರಣೆChamundeshwari-Rath Yatra-Dynasty-Yadavir-driving

ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದಿಕ್ಷೀತ್ ಮಾತನಾಡಿ, ಸಾಂಪ್ರದಾಯಿಕವಾಗಿ ಚಾಮುಂಡೇಶ್ವರಿ ರಥೋತ್ಸವ ನೆರವೇರಿದೆ. ಸಾಂಪ್ರದಾಯಕ್ಕೆ ಧಕ್ಕೆ ಬಾರದಂತೆ ರಥೋತ್ಸವ ನಡೆಸಿದ್ದೇವೆ. ಈ ಬಾರಿ ತೆಪ್ಪೋತ್ಸವ ಇರುವುದಿಲ್ಲ ಎಂದರು.

ಈ ಬಾರಿ ತೆಪ್ಪೋತ್ಸವ ಇರೋದಿಲ್ಲ

ರಾಜ್ಯದ ಎಲ್ಲಿಯೂ ರಥೋತ್ಸವ ನಡೆದಿಲ್ಲ. ನಮ್ಮಲ್ಲಿ ಸರಳವಾಗಿ ರಥೋತ್ಸವ ನಡೆಯಲು ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಸಹಕಾರಕ್ಕೆ ನಾವು ಧನ್ಯವಾದ ಹೇಳುತ್ತೇವೆ. ಈ ಬಾರಿ ತೆಪ್ಪೋತ್ಸವ ಇರೋದಿಲ್ಲ. ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Chamundeshwari-Rath Yatra-Dynasty-Yadavir-driving

key words : Chamundeshwari-Rath Yatra-Dynasty-Yadavir-driving