ಕೊಳ್ಳೇಗಾಲದಲ್ಲಿ ಕರಾಟೆ ಕಿಡ್ಸ್ : ಸಚಿವ ದಿಲ್ ಖುಷ್….

ಚಾಮರಾಜನಗರ,ಜೂ,19,2020(www.justkannada.in): ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್  ಇಂದು ಕೊಳ್ಳೇಗಾಲದಲ್ಲಿ  ಕರಾಟೆ ಪಟುಗಳನ್ನ ಮಾತನಾಡಿಸಿ ಫುಲ್ ದಿಲ್ ಖುಷ್ ಆದರು.

ಹೌದು, ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದ  ಸಚಿವ ಸುರೇಶ್ ಕುಮಾರ್ ಅವರೇ ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.  ಇಂದು ನನ್ನ ಉಸ್ತುವಾರಿ ಚಾಮರಾಜನಗರ ಜಿಲ್ಲಾ ಪ್ರವಾಸದ ಸಮಯದಲ್ಲಿ, ಕೊಳ್ಳೇಗಾಲದಲ್ಲಿ ಓಡುತ್ತಿದ್ದ ಈ ಕರಾಟೆ ಪಟುಗಳನ್ನು ಮಾತನಾಡಿಸಿದೆ. ಈ ಮಕ್ಕಳು ವಾರಕ್ಕೊಮ್ಮೆ ಹತ್ತು ಕಿ.ಮೀ. ಓಡುತ್ತಾರಂತೆ.‌ ಇವರಲ್ಲಿ ಒಂದನೇಯ ತರಗತಿಯಿಂದ ಎಂಟನೆಯ ತರಗತಿಯವರೆಗಿನ ಮಕ್ಕಳಿದ್ದರು. ಅವರ ತರಬೇತಿ, ಯಾವ ವರ್ಷದಿಂದ ಕರಾಟೆ ಕಲಿಯಲು ಪ್ರಾರಂಭಿಸಿದ್ದು….ಎಂದೆಲ್ಲಾ ವಿಚಾರಿಸಿದೆ.

ಅಷ್ಟೊತ್ತಿಗೆ ಅವರ ಕೋಚ್ ನಂಜುಂಡಸ್ವಾಮಿ ಸಹ ಬಂದರು. ಅವರು ಪ್ರತಿ ವರ್ಷ ಸರಕಾರಿ ಶಾಲೆಯ‌ ಮಕ್ಕಳಿಗೂ ಕರಾಟೆ ಹೇಳಿಕೊಡುತ್ತಿರುವುದನ್ನು ಕೇಳಿ ಖುಷಿಯಾಯಿತು. ಸ್ಥಳೀಯ ಶಾಸಕರಾದ ಮಹೇಶ್ ಸಹ ಜೊತೆಗಿದ್ದರು ಎಂದು ಸಚಿವ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

Key words: chamarajngar-minister- S.Suresh kumar-karate- students