ಚಾಮರಾಜನಗರ ಆಕ್ಸಿಜನ್ ದುರಂತ: ತನಿಖೆ ನಡೆಸಿ ಮೂರುದಿನಗಳಲ್ಲಿ ವರದಿ ಸಲ್ಲಿಸಲು ಆದೇಶ- ಸಚಿವ ಸುರೇಶ್ ಕುಮಾರ್…

ಚಾಮರಾಜನಗರ,ಮೇ,3,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ರೋಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು  ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ಅವರನ್ನು ಸರ್ಕಾರ ನಿಯೋಜಿಸಿದೆ. 3 ದಿನದಲ್ಲಿ ಅವರು ತನಿಖಾ ವರದಿ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.jk

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಸಚಿವ ಸುಧಾಕರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಶಾಸಕರಾದ ಪುಟ್ಟರಂಗ ಶೆಟ್ಟಿ, ನರೇಂದ್ರ, ನಿರಂಜನ್, ಎನ್.ಮಹೇಶ್ ಹಾಜರಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಕಳೆದ ವರ್ಷ ಚಾಮರಾಜನಗರ ಹಸಿರು ವಲಯದಲ್ಲಿ ಇದ್ದ ಜಿಲ್ಲೆ. ಇಂದು ವಿಶಿಷ್ಠ,  ಸಂದಿಗ್ದ ಸನ್ನಿವೇಶ ಎದುರಿಸುತ್ತಿದ್ದೇವೆ. ನಿನ್ನೆ ಸಂಜೆಯಿಂದ ಇಂದು ಬೆಳಿಗ್ಗೆ 7 ರವರೆಗೆ 24 ಕೋವಿಡ್ ಸಾವು ಸಂಭವಿಸಿದೆ.ಪ್ರತಿಯೊಬ್ಬರ ಸಾವು ನಮಗೆ ದೊಡ್ಡ ನಷ್ಟ. ಅವರವರ ಕುಟುಂಬಕ್ಕೂ ಇದು ದೊಡ್ಡ ಆಘಾತ ಎಂದು ಬೇಸರ ವ್ಯಕ್ತಪಡಿಸಿದರು.chamarajanagar-oxigen- report –within- three days- minister - Suresh Kumar

ಅಮ್ಲಜನಕ ಕೊರತೆಯಿಂದ ಈ ಸಾವು ಅಗಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆಮ್ಲಜನಕ ಯಾವ ಯಾವ ಪ್ರಮಾಣದಲ್ಲಿ ಬಂದಿದೆ ಮಾಹಿತಿ ಇದೆ. ಎಲ್ಲಾ ಸಾವುಗಳು ಅಮ್ಲಜನಕ ಕೊರತೆಯಿಂದಲೇ ಸಂಭವಿಸಿದ್ದಲ್ಲ. ಕೋವಿಡ್ ನಲ್ಲೇ ಕೊನೆ ಹಂತದಲ್ಲಿ‌ ದಾಖಲಾಗಿದ್ದವರೂ ಇದ್ದಾರೆ. ಈ ಬಗ್ಗೆ ತನಿಖೆ ಅಗಬೇಕು. 24 ರಲ್ಲಿ ಅಮ್ಲಜನಕದಿಂದ ಎಷ್ಟು ಸಾವು ಎಂಬುದನ್ನು ಪತ್ತೆ ಮಾಡಬೇಕು. 3 ದಿನಗಳಲ್ಲಿ ವಿಚಾರಣೆ ಮಾಡಲು ಕೆಎಸ್ಸರ್ಟಿಸಿ ಎಂಡಿ ಶಿವಯೋಗಿ ಕಳಸದ್ ಅವರನ್ನು ಸರ್ಕಾರ ನಿಯೋಜಿಸಿದೆ. ಅವರು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

Key words: chamarajanagar-oxigen- report –within- three days- minister – Suresh Kumar