ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ತನ್ನ ಸಂಕಷ್ಟದ ಬಗ್ಗೆ ಪತ್ರ ಬರೆದ ಸ್ಮಶಾನ ಕಾಯುವ ವ್ಯಕ್ತಿ

kannada t-shirts

ಬೆಂಗಳೂರು:ಮೇ-10:(www.justkannada.in) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸ್ಮಶಾನದಲ್ಲಿ ಕೆಲಸ ಮಾಡುವಾತ ಪತ್ರವೊಂದನ್ನು ಬರೆದಿದ್ದು, ತನ್ನ ಹಾಗೂ ತನ್ನ ಕುಟುಂಬದ ಸಂಕಷ್ಟದ ಬಗ್ಗೆ ವಿವರಿಸಿ ತನಗೆ ಸಹಾಯ ಮಾಡುವಂತೆ ಕೋರಿದ್ದಾರೆ.

ಮಂಡ್ಯ ಲೋಕಸಚಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿ, ರಾಜಕಾರಣಿಗಳಿಗೆ ಮಾತಿನಲ್ಲಿ ತಿರುಗೇಟು ನೀಡಿ ಬಿಸಿ ಮುಟ್ಟಿಸಿದ್ದ ನಟ ದರ್ಶನ್ ಮೇಲೆ ಈಗ ಹಲವರಿಗೆ ನಿರೀಕ್ಷೆಗಳು ಹೆಚ್ಚಿದ್ದು, ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ತಮಗೂ ಸಹಾಯ ಮಾಡುತ್ತಾರೆ ಎಂಬ ಆಶಯ ಹಲವರದ್ದಾಗಿದೆ. ಈ ನಿಟ್ಟಿನಲ್ಲಿ ಕಲ್ಲಳ್ಳಿ ಸ್ಮಶಾನದಲ್ಲಿ ಹೆಣ ಸುಡುವ ಕಾಯಕದಲ್ಲಿ ತೊಡಗಿರುವ ಅಂಥೋನಿ ಸ್ವಾಮಿ ತನ್ನ ಸಂಕಷ್ಟಗಳ ಬಗ್ಗೆ ನಟ ದರ್ಶನ್ ಗೆ ಪತ್ರ ಬರೆದಿದ್ದಾರೆ.

ಅಂಥೋನಿ ಇಡೀ ಕುಟುಂಬ ಕಳೆದ 20 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದ್ದು, ಇವರಿಗೆ ಬಿಬಿಎಂಪಿ ನಿಗದಿ ಪಡಿಸಿದ 1 ಸಾವಿರ ವೇತನವನ್ನು ಕಳೆದ ಎಂಟು ವರ್ಷಗಳಿಂದ ನೀಡಿಲ್ಲ. ಸಹಾಯಧನ ನೀಡಿ ಎಂದು ಎಲ್ಲಾ ಅಧಿಕಾರಿಗಳಿಗೆ, ಸಚಿವರುಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಅಂಥೋನಿ ದರ್ಶನ್ ಅವರಿಗೆ ಪತ್ರ ಬರೆದು ತನಗೆ ಸಂಬಳವನ್ನು ಹೇಗಾದರೂ ಮಾಡಿ ಕೊಡಿಸಿ ಎಂದು ಕೇಳಿದ್ದಾರೆ.

ನಾನು 30 ವರ್ಷದಿಂದ ಕಲ್ಲಳ್ಳಿ ಸ್ಮಶಾನದಲ್ಲಿ ವಿದ್ಯುತ್ ಚಿತಗಾರ ಕೆಲಸವನ್ನು ಮಾಡಿಕೊಂಡಿದ್ದೇನೆ. ಇಲ್ಲಿ ಕೆಲಸ ಮಾಡುವವರೆಲ್ಲರಿಗೂ ನಿಮ್ಮ ಮೇಲೆ ಅಪಾರ ಗೌರವವಿದೆ. ಆದರೆ ಅವರ ಮನೆಗಳಲ್ಲಿಯೂ ಸಹ ಪರಿಸ್ಥಿತಿ ಸರಿಯಿಲ್ಲ. ಅವರೆಲ್ಲರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಈ ಸ್ಮಶಾನದಲ್ಲಿ ಕೆಲಸ ಮಾಡಿ ಬಾಡಿಗೆ ಮತ್ತು ಕುಟುಂಬವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಮತ್ತು ಇಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಸಹ ಬಹಳ ಕಷ್ಟವಾಗಿದೆ. ಅವರಲ್ಲಿ ಒಬ್ಬನ ಮಗು ಅಂಗವೈಕಲ್ಯಕ್ಕೆ ತುತ್ತಾಗಿದೆ. ಆ ಮಗುವಿಗೆ ಚಿಕಿತ್ಸೆ ನೀಡಲು ಬಹಳ ಕಷ್ಟವಾಗಿದೆ. ಎಷ್ಟೋ ರಾಜಕಾರಣಿಗಳಿಗೆ ಮತ್ತು ಬಿಬಿಎಂಪಿಯವರಿಗೂ ತಿಳಿಸಿದ್ದೇನೆ. ಆದರೆ ಯಾವ ಪ್ರಯೋಜನವಾಗಿಲ್ಲ. ನಿಮ್ಮ ಸೇವಾ ಮನೋಭಾವ ನೋಡಿ ನಿಮ್ಮನ್ನು ಕೇಳಿದರೆ ಏನಾದರೂ ಸಹಾಯವಾಗಬಹುದು ಎಂಬ ನಂಬಿಕೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ತನ್ನ ಸಂಕಷ್ಟದ ಬಗ್ಗೆ ಪತ್ರ ಬರೆದ ಸ್ಮಶಾನ ಕಾಯುವ ವ್ಯಕ್ತಿ
challenging star darshan gets an emotional letter from man who works in graveyard

website developers in mysore