ಉದ್ಯಮಿಗೆ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ವಂಚನೆ ಪ್ರಕರಣ: ಹಾಲಶ್ರೀ ಬಂಧಿಸಿದ ಸಿಸಿಬಿ ಪೊಲೀಸರು.

Promotion

ಬೆಂಗಳೂರು,ಸೆಪ್ಟಂಬರ್,19,2023(www.justkannada.in): ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಬಳಿ 5 ಕೋಟಿ ಪಡೆದು ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣದ 3ನೇ ಆರೋಪಿ ಹಾಲಶ್ರೀಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ 3ನೇ ಆರೋಪಿ ಹಾಲಶ್ರೀಯವರನ್ನ ಒಡಿಶಾದ ಕಟಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಭುವನೇಶ್ವರಂದಿಂದ  ಬೋಧ್ ಗಯಾಗೆ ತೆರಳುತ್ತಿದ್ದ ವೇಳೆ ಒಡಿಶಾ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ.

ಇಂದು ರಾತ್ರಿ ಬೆಂಗಳೂರಿಗೆ ಹಾಲಶ್ರೀಯನ್ನ ಪೊಲೀಸರು ಕರೆತರಲಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ತಮ್ಮ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Key words: Chaitra Kundapur – fraud- case –CCB police- arrested- Halashree