ಸಿಇಟಿ ಫಲಿತಾಂಶ ಪ್ರಕಟ: ಮೈಸೂರಿನ ಮೇಘನ್ ಹೆಚ್.ಕೆ ನಾಲ್ಕು ವಿಭಾಗಗಳಲ್ಲಿ ಟಾಪ್.

ಬೆಂಗಳೂರು.ಸೆಪ್ಟಂಬರ್,20,2021(www.justkannada.in) ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆಗಸ್ಟ್ 28 ಮತ್ತು 29ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ಮೇಘನ್ ಹೆಚ್​.ಕೆ  ಸಿಇಟಿ ಇಂಜಿನಿಯರಿಂಗ್​ ಸೇರಿದಂತೆ ನಾಲ್ಕು ಕೋರ್ಸ್ ಗಳಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಸಿಇಟಿ ರ್ಯಾಂಕ್ ಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್  ಪ್ರಕಟಿಸಿದ್ದಾರೆ. ಮೈಸೂರಿನ ಮೇಘನ್ ಹೆಚ್ – ಮೊದಲ ಸ್ಥಾನ ಪಡೆದರೆ, ಬೆಂಗಳೂರಿನ ಪ್ರೇಮಂಕುರ್ ಎರಡನೇ ಸ್ಥಾನ ಪಡೆದಿದ್ದಾರೆ, ಬಿಎಸ್ ಅನಿರುಧ್ ಮೂರನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಫಲಿತಾಂಶ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್​ ನಾರಾಯಣ್, ಎಂಜಿನಿಯರಿಂಗ್​, ಬಿ ಫಾರ್ಮ್​, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್​ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.

Key words: CET-Result- Publish- Mysore- Meghan HK -top