ಕಾಯ್ದೆ ಹಿಂಪಡೆಯುವುದೇ ಪರಿಹಾರ: ಕೆಂಪುಕೋಟೆ ಪ್ರವೇಶಕ್ಕೆ ಅವಕಾಶ ನೀಡಿದ್ದೇಕೆ..? – ರಾಹುಲ್ ಗಾಂಧಿ ಪ್ರಶ್ನೆ…

kannada t-shirts

ನವದೆಹಲಿ,ಜನವರಿ,29,2021(www.justkannada.in): ಗಣರಾಜೋತ್ಸವ ದಿನ ಕೆಂಪುಕೋಟೆ ಪ್ರವೇಶಿಸಲು ಪ್ರತಿಭಟನಾನಿರತ ರೈತರಿಗೆ  ಅವಕಾಶ ನೀಡಿದ್ದೇಕೆ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.jk

ಇಂದು ಸುದ್ಧಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,  ಗಣರಾಜ್ಯೋತ್ಸವ ಘಟನೆ ಹಾಗೂ ರೈತರ ಹೋರಾಟ ಕುರಿತು ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಕೃಷಿ ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ತೊಂದರೆಯಾಗುತ್ತದೆ.  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನು ತಕ್ಷಣವೇ ಹಿಂಪಡೆದುಕೊಳ್ಳಬೇಕು. ಕಳೆದ ಅನೇಕ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಅವರೊಂದಿಗೆ ಮಾತನಾಡಿಲ್ಲ. ಅವರ ಮೇಲೆ ಹಲ್ಲೆ ನಡೆಸುವ ಕೆಲಸ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.central Government-solution - Withdrawal – act-congress- leader-Rahul Gandhi

ರೈತರ ಪ್ರತಿಭಟನೆ ದೇಶದ ಧ್ವನಿ. ರೈತರ ವಿರುದ್ಧ ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿದೆ. ಆದರೆ ರೈತರು ಹಿಂದೆ ಸರಿಯುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವುದೇ ಪರಿಹಾರ. ಹೀಗಾಗಿ ಕೂಡಲೇ ಕಾಯ್ದೆ ವಾಪಸ್ ಪಡೆಯಿರಿ ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.

Key words: central Government-solution – Withdrawal – act-congress- leader-Rahul Gandhi

website developers in mysore