ದೇಶಾದ್ಯಂತ ಅಗಸ್ಟ್ 15ರ ಬಳಿಕ ಶಾಲಾ ಕಾಲೇಜುಗಳ ಪುನಾರಂಭಕ್ಕೆ ಕೇಂದ್ರ ಸರ್ಕಾರ ಚಿಂತನೆ….

ನವದೆಹಲಿ,ಜೂ,8,2020(www.justkannada.in):  ಕೊರೋನಾ ಮಹಾಮಾರಿಯಿಂದಾಗಿ ಲಾಕ್ ಡೌನ್ ಹಿನ್ನೆಲೆ ದೇಶಾದ್ಯಂತ  ಬಂದ್ ಮಾಡಲಾಗಿರುವ ಶಾಲಾಕಾಲೇಜುಗಳು ಆಗಸ್ಟ್ ನಂತರವೇ ಪುನಾರಂಭಗೊಳ್ಳಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್  ಸ್ಪಷ್ಟನೆ ನೀಡಿದ್ದಾರೆ.

ಶಾಲಾ ಕಾಲೇಜುಗಳ ಪುನಾರಂಭದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್, ದೇಶಾದ್ಯಾಂತ ಶಾಲಾ ಕಾಲೇಜುಗಳು ಆಗಸ್ಟ್ ನಂತರವೇ ಪುನಾರಂಭಗೊಳ್ಳಲಿದೆ. ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಆಗಸ್ಟ್ ಬಳಿಕ ಶಾಲೆ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.central-government-reopening-school-colleges-after-august-15

ಆಗಸ್ಟ್ 15ರ ನಂತರ ಶಾಲೆಗಳು ಮತ್ತು ಕಾಲೇಜುಗಳನ್ನು  ಪುನಾರಂಭಿಸಲು ಚಿಂತನೆ ನಡೆಸಲಾಗಿದೆ. ಈ ಅಧಿವೇಶನದಲ್ಲಿ ನಡೆದ ಪರೀಕ್ಷೆಗಳ ಎಲ್ಲಾ ಫಲಿತಾಂಶಗಳನ್ನು ಆಗಸ್ಟ್ ವೇಳೆಗೆ ಘೋಷಿಸಲು ಆಡಳಿತವು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ರಮೇಶ್ ಪೋಕ್ರಿಯಾಲ್ ತಿಳಿಸಿದ್ದಾರೆ.

Key words: Central government – reopening – school –colleges- after- August 15