ದೇಶಾದ್ಯಂತ ಕ್ಷೀರ ಕ್ರಾಂತಿ ಮಾಡಲು ಕೇಂದ್ರ ಸರ್ಕಾರ ಸಿದ್ಧ- ಕೇಂದ್ರ ಗೃಹ ಸಚಿವ ಅಮಿತ್ ಶಾ.

ಮಂಡ್ಯ,ಡಿಸೆಂಬರ್,30,2022(www.justkannada.in): ದೇಶಾದ್ಯಂತ ಕ್ಷೀರಕ್ರಾಂತಿ ಮಾಡಲು ಕೇಂದ್ರ ಸರ್ಕಾರ ಸಿದ್ಧ.ಪ್ರತಿ ಪಂಚಾಯಿತಿಯಲ್ಲೂ ಡೇರಿ ಘಟಕ ಸ್ಥಾಪನೆ,  2 ಲಕ್ಷ ಪ್ರಾಥಮಿಕ ಡೈರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಳಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಮಂಡ್ಯ ಜಿಲ್ಲೆ ಮದ್ಧೂರು ತಾಲ್ಲೂಕು ಗೆಜ್ಜಲಗೆರೆಯಲ್ಲಿ ಮೆಗಾ ಡೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ,   1975ರಿಂದ 2022ರವರೆಗೂ ಡೇರಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಾಗಿದೆ.  ನಮ್ಮ ಸರ್ಕಾರ ಹೊಸದಾಗಿ ಸಹಕಾರ ಇಲಾಖೆಯನ್ನ ಸ್ಥಾಪಿಸಿದೆ. ಮೋದಿಯವರು ಸಹಕಾರ ಇಲಾಖೆ ಸ್ಥಾಪಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.  ಸಹಕಾರ ಕ್ಷೇತ್ರದ ಸದಸ್ಯರಿಗೆ ಅನ್ಯಾಯವಾಗಲು ಬಿಡಲ್ಲ. ರೈತರಿಗೆ ಯಾವುದೇ ಅನ್ಯಾಯವಾಗಲು ನಾವು ಬಿಡಲ್ಲ ಎಂದರು.

ಒಟ್ಟು 260 ಕೋಟಿ ವೆಚ್ಚದಲ್ಲಿ ಮೆಗಾಡೇರಿ ನಿರ್ಮಾಣವಾಗಿದೆ.  ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯ ಇದೆ.  ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.  5210 ಸಹಕಾರಿ  ಹಾಲು ಉತ್ಪಾದನಾ ಡೇರಿ ಕೇಂದ್ರ ಗಳಿವೆ .  16 ಜಿಲ್ಲೆಗಳಿಂದ ಪ್ರತಿ ತಿಂಗಳು 28 ಕೋಟಿ ಸಂದಾಯ.ವಾಗುತ್ತಿದ್ದು, ಅಮೂಲ್ ಹಾಗೂ ನಂದಿನಿ ಕೇಂದ್ರಗಳು ಒಟ್ಟಾಗಿ ಕೆಲಸ  ಮಾಡಿದರೇ ಪ್ರತಿ ಹಳ್ಳಿಯಲ್ಲೂ ಡೇರಿ ಘಟಕ ಸ್ಥಾಪನೆ ಮಾಡಬಹುದು ಎಂದು ಅಮಿತ್ ಶಾ ತಿಳಿಸಿದರು.

Key words: central government – ready – milk revolution – country- Amith Shah.