ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

ಬೆಂಗಳೂರು,ಏಪ್ರಿಲ್,8,2021(www.justkannada.in): ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.Illegally,Sand,carrying,Truck,Seized,arrest,driver

ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಪ್ರಧಾನಿ ಮೋದಿ ಬಿಎಸ್ ವೈ ಸರ್ಕಾರದಿಂದ  ಜನರು ಭ್ರಮನಿರಸನರಾಗಿದ್ದಾರೆ. ಕಳೆದ 7 ವರ್ಷಗಳಿಂದ ಪ್ರಧಾನಿ ಮೋದಿ  ಸುಳ್ಳು ಭರವಸೆ ನೀಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ 2014ರಲ್ಲಿ ಇದ್ದಷ್ಟು ಈಗ ಇಲ್ಲ. ಈಗ ದುಪ್ಪಟ್ಟು ಆಗಿದೆ. ಇದು ಪ್ರಧಾನಿ ಮೋದಿಯವರ ಅಚ್ಚೇದಿನ್ ..?  ಬೆಲೆ ನಿಯಂತ್ರಿಸುವಲ್ಲಿ ಸರ್ಕಾರ ಸೋತಿದೆ ಎಂದು ಲೇವಡಿ ಮಾಡಿದರು.

Central government -fails - control -price rise-Former CM -Siddaramaiah
ಕೃಪೆ- internet

ಬಿಎಸ್ ಯಡಿಯೂರಪ್ಪ ಅಪರೇಷನ್ ಕಮಲ ಆರಂಭಿಸಿದರು. ಹಾಗಂದರೇ ಹಣ ನೀಡಿ ಶಾಸಕರನ್ನ ಖರೀದಿಸುವುದು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟಿನ್, ಕೃಷಿ ಭಾಗ್ಯ ಯೋಜನೆ ನಿಲ್ಲಿಸಿದ್ದಾರೆ. ಅನ್ನಭಾಗ್ಯ ಅಕ್ಕಿ ಕೂಡ ಕಡಿತ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Central government -fails – control -price rise-Former CM -Siddaramaiah