ಪರಿಶಿಷ್ಟ ಜಾತಿ ಮಕ್ಕಳ ಶಿಕ್ಷಣಕ್ಕೆ ಹೊಸ ಯೋಜನೆ ಘೋಷಿಸಿದ ಕೇಂದ್ರ ಸರಕಾರ

Promotion

ಬೆಂಗಳೂರು, ಜೂನ್ 05, 2022 (www.justkannada.in): ಪರಿಶಿಷ್ಟ ಜಾತಿ ಮಕ್ಕಳಿಗಾಗಿ ಶ್ರೇಷ್ಠ ಸ್ಕೀಂ(ಫಾರ್ ರೆಸಿಡೆನ್ಸಿಯಲ್ ಎಜುಕೇಶನ್ ಟಾರ್ಗೆಟೆಡ್ ಏರಿಯಾ -SRESHTA) ವಸತಿಯುತ ಶಿಕ್ಷಣ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ್ ಯೋಜನೆ ಘೋಷಣೆ ಮಾಡಿದ್ದಾರೆ.

ಸಿಬಿಎಸ್‌ಇ ಮಾನ್ಯತೆ ಪಡೆದ ಮತ್ತು ಕೇಂದ್ರದ ಮಾನದಂಡಗಳನ್ನು ಪೂರ್ಣಗೊಳಿಸಿದ ಖಾಸಗಿ ವಸತಿ ಶಾಲೆಗಳಲ್ಲಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪ್ರವೇಶ ಪರೀಕ್ಷೆ ಮೂಲಕ 9 ಮತ್ತು 11 ನೇ ತರಗತಿ ಪ್ರವೇಶ ನೀಡಲು ಪರಿಶಿಷ್ಟಜಾತಿಯ 3000 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಯೋಜನೆಯಡಿ ಖಾಸಗಿ ವಸತಿ ಶಾಲೆಗಳಲ್ಲಿ ಉಚಿತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಎಂದು ಸಚಿವ ಡಾ.ವೀರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.