ಕೃಷಿ ಉತ್ಪಾದನೆ ಪ್ರಮಾಣ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಕೇಂದ್ರ ಬಜೆಟ್ ಪೂರಕ-ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಫೆಬ್ರವರಿ,13,2021(www.justkannada.in):  ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್. ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಇದು ಪೂರಕ ಎನಿಸಲಿದೆ  ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಇಂದು ದೇಶದ 728 ಜಿಲ್ಲಾ ಕೇಂದ್ರಗಳಲ್ಲಿ ಈ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯದ ಪ್ರಮುಖ ಅಂಶಗಳನ್ನು ಜಿಲ್ಲಾ ಉಸ್ತುವಾರಿ ಸಚಿವರುಗಳು ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಮುಖಾಂತರ ಜನತೆಯ ಮುಂದೆ ಇಡುವ ಅಂಗವಾಗಿ ಮೈಸೂರಿನ ಪ್ರೆಸ್ ಕ್ಲಬ್ ನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವಿವರಗಳನ್ನ ನೀಡಿದರು.jk

ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರದ ಮುಂದೆ ಇನ್ನಷ್ಟು ತೆರಿಗೆ ವಿಧಿಸಿ ಹಣ ಸಂಗ್ರಹಿಸುವುದು ಅಥವಾ ಸಾಲ ಮಾಡಿಯಾದರೂ ಹೆಚ್ಚು ಮೂಲಸೌಕರ್ಯ ಒದಗಿಸುವುದು, ಹಣಕಾಸು ಚಟುವಟಿಕೆ ಹೆಚ್ಚಳ ಹಾಗೂ ಉತ್ಪಾದನೆ ಹೆಚ್ಚಳದ ಎರಡು ಆಯ್ಕೆಗಳಿದ್ದವು. ಇದರಲ್ಲಿ ಎರಡನೇ ಆಯ್ಕೆ ನಮ್ಮದಾಯಿತು. ಇದು ಭಾರತವನ್ನು 2025ರ ವೇಳೆಗೆ 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆಯತ್ತ ಒಯ್ಯಲಿದೆ ಎಂದು ತಿಳಿಸಿದರು.

ಇದೊಂದು ಐತಿಹಾಸಿಕ ಬಜೆಟ್. ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಇದು ಪೂರಕ ಎನಿಸಲಿದೆ. ಎರಡನೇ ವಿಚಾರ ಕಷ್ಟದಾಯಕವಿದ್ದರೂ ಜನರ ಹಿತದೃಷ್ಟಿಯಿಂದ ಈ ವಿಚಾರವನ್ನು ಆಯ್ಕೆ ಮಾಡಲಾಯಿತು. ಅಂತರರಾಷ್ಟ್ರೀಯ ಹಣಕಾಸು ನಿಧಿಯೂ (ಐಎಂಎಫ್) ಭಾರತವು ಅತಿ ವೇಗದಿಂದ ಅಭಿವೃದ್ಧಿ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇದೇಕಾರಣಕ್ಕೆ ನಾವು ಮೂಲ ಸೌಕರ್ಯಕ್ಕೆ ಗರಿಷ್ಠ ಒತ್ತನ್ನು ನೀಡಲಾಗಿದೆ. ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ವಿವಿಧ ಕ್ಷೇತ್ರಗಳ ಮೂಲಸೌಕರ್ಯ ವೃದ್ಧಿಗೆ ಒಟ್ಟಾಗಿ ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.central-budget-supplement-agricultural-production-minister-st-somashekhar

ಭಾರತ ಜಗತ್ತಿನ ಆರೋಗ್ಯದ ಕೇಂದ್ರ (ಹಬ್) ಆಗುವತ್ತ ಮುನ್ನಡೆಯಲಿದೆ. ಕಳೆದ ಸಾಲಿನ 94 ಸಾವಿರಕೋಟಿರೂ. ಬದಲು ಈ ಬಾರಿ ಈ ಕ್ಷೇತ್ರದ ಹೂಡಿಕೆಯನ್ನು 2,23,000 ಕೋಟಿಗೆ ಏರಿಸಲಾಗಿದೆ. ಇದರಿಂದ ಬೃಹತ್ ಆರೋಗ್ಯ ಮೂಲ ಸೌಕರ್ಯ ಕೇಂದ್ರವಾಗಿ ಭಾರತವು ಬೆಳೆಯಲಿದೆ.

2021-22ನೇ ಸಾಲಿನ ಕೇಂದ್ರ ಬಜೆಟ್ ನಡಿ ಕೇಂದ್ರ ಸರಕಾರವು 34,83,236 ಕೋಟಿ ರೂಪಾಯಿಗಳನ್ನು ವಿವಿಧ ಕ್ಷೇತ್ರಗಳಡಿ ವ್ಯಯಿಸಲು ಉದ್ದೇಶಿಸಿದೆ. ವಿತ್ತೀಯ ಕೊರತೆ ಕಳೆದ ಬಾರಿ ಶೇಕಡ 4.6ರಷ್ಟಿದ್ದುದು ಈ ಬಾರಿ ಶೇಕಡ 6.8ರಷ್ಟು ಇದ್ದರೂ, ಮೂಲಭೂತ ಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡುವ ಕಾರಣ ಸರಕು ಸೇವಾ ಕ್ಷೇತ್ರ, ಆರೋಗ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಎನಿಸಲಿದ್ದು, ಈ ಬಜೆಟ್ ಅನ್ನು ಸ್ವಾಗತಿಸುತ್ತೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಬಜೆಟ್ ನಲ್ಲಿನ ವಿವರ ಕುರಿತ ಮಾಹಿತಿ ಹೀಗಿದೆ…

O 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು, 1,197 ಕಿ.ಮೀ.- 10,904 ಕೋಟಿ ಬಿಡುಗಡೆ.

O 2021-22ರಲ್ಲಿ ಕರ್ನಾಟಕದಲ್ಲಿ 1,16,144 ಕೋಟಿ ರೂ.ನ ಮೂಲ ಸೌಕರ್ಯ ವ್ಯವಸ್ಥೆ ನಿಮರ್ಾಣ.

O 2ನೇ ಹಂತದ ಬೆಂಗಳೂರು ಮೆಟ್ರೋ ನಿರ್ಮಾಣಕಾಮಗಾರಿಗೆ 14,788 ಕೋ ರೂ. ಬಿಡುಗಡೆ.

O ಬೆಂಗಳೂರು ಉಪನಗರ ಯೋಜನೆಗೆ 23,093 ಕೋಟಿ ರೂ.ಬಿಡುಗಡೆ

o ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 4,870 ಕೋಟಿ ರೂಪಾಯಿ ಅನುದಾನ ಬಿಡುಗಡೆ.

O ತುಮಕೂರು 7,725 ಕೋಟಿರೂ ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್(ಸಣ್ಣಸಣ್ಣ ಕೇಂದ್ರಗಳ) ನಿಮರ್ಾಣ. ಈ

o ಮೂಲಕ 2.8 ಲಕ್ಷ ಉದ್ಯೋಗವಕಾಶ ಲಭಿಸಲಿದೆ.

O ಅಮೆರಿಕದ ಸಂಸ್ಥೆಯಾದ ಟೆಸ್ಲಾವು ಎಲೆಕ್ಟ್ರಿಕಲ್ ಕಾರು ಉತ್ಪಾದನಾ ಘಟಕವನ್ನು ಕನರ್ಾಟಕದಲ್ಲಿ ತೆರೆಯಲಿದೆ.

O ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್ಲೈನ್ ಲೋಕಾರ್ಪಣೆ (ಜನವರಿ 2021).

O ಉತ್ತರ ಕರ್ನಾಟಕ ಭಾಗದಲ್ಲಿ 21,000 ಕೋಟಿ ರೂ. ವೆಚ್ಚದಲ್ಲಿ 13 ಹೆದ್ದಾರಿ ನಿಮರ್ಾಣದ ಯೋಜನೆಗೆ ಅಸ್ತು.

O ಬೆಂಗಳೂರು- ಮಂಗಳೂರಿಗೆ ಸಂಪರ್ಕಕೊಂಡಿಯಾಗಿರುವ ಶಿರಾಡಿಯ ಸುರಂಗ ಮಾರ್ಗ ನಿಮರ್ಾಣಕ್ಕೆ ಅನುಮೋದನೆ. ಒಟ್ಟು 13ಕಿ.ಮೀ ಉದ್ದದ 6 ಸುರಂಗ ಮಾರ್ಗ. 1.5 ಕಿ.ಮೀ ಉದ್ದದ10 ಸೇತುವೆಗಳು ವೆಚ್ಚ 10,000 ಕೋಟಿ ಬಿಡುಗಡೆ.

ರೈತರಕಲ್ಯಾಣಕ್ಕೆ ಬದ್ಧವಾದ ಬಜೆಟ್

O ಹಳ್ಳಿಗಳಲ್ಲಿ ಆಸ್ತಿ ಮಾಲಿಕರಿಗೆ ಹಕ್ಕು ಪತ್ರ ನೀಡುವ ಸ್ವಾಮಿತ್ವ ಯೋಜನೆ ಎಲ್ಲರಾಜ್ಯ ಮತ್ತು ಕೇಂದ್ರಾಡಳಿತ                  ಪ್ರದೇಶಗಳಿಗೆ ವಿಸ್ತರಣೆ.

O ಕೃಷಿ ಸಾಲ ವಿತರಣೆಯಗುರಿ: 16.5 ಲಕ್ಷಕೋಟಿರೂ.

O ಹೈನುಗಾರಿಕೆ ಮತ್ತು  ಮೀನುಗಾರಿಕೆಗೆ ಹೆಚ್ಚಿನ ಸಾಲ ಸೌಲಭ್ಯ.

O ಗ್ರಾಮೀಣ ಮೂಲ ಸೌಕರ್ಯಅಭಿವೃದ್ದಿ ನಿಧಿ: 40,000 ಕೋಟಿರೂ ಗೆ ಏರಿಕೆ.

O ಸೂಕ್ಷ್ಮ ನೀರಾವರಿ ಯೋಜನೆಗಳಿಗೆ ಅನುದಾನಇಮ್ಮಡಿ : 10,000 ಕೋಟಿರೂ.

O ಶೀಘ್ರ ಹಾಳಾಗುವ ಹಣ್ಣು, ತರಕಾರಿಯಂತಹ ಹೆಚ್ಚುವರಿ 22 ಕೃಷಿ ಉತ್ಪನ್ನಗಳು ಆಪರೇಷನ್ಗ್ರೀನ್ಯೋಜನೆ ವ್ಯಾಪ್ತಿಗೆ.

O ಎಪಿಎಂಸಿ ಬಲವರ್ಧನೆಗೆ ಸಂಕಲ್ಪ; ಕೃಷಿ ಮೂಲ ಸೌಕರ್ಯ ನಿಧಿ ಬಳಕೆಗೆ ಅನುಮತಿ.

O 1,000 ಎಪಿಎಂಸಿ ಮಂಡಿಗಳನ್ನು ಎಲೆಕ್ಟ್ರಾನಿಕ್ರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಗೆ ಸಂಯೋಜಿಸಲುಅನುಮತಿ.

O ನರೇಗಾಯೋಜನೆಗೆ 73,000 ಕೋಟಿರೂ.

O ಗುತ್ತಿಗೆಕಾರ್ಮಿಕರು ಮತ್ತು ಇತರ ಕಾರ್ಮಿಕರಿಗೂ ಸಾಮಾಜಿಕ ಭದ್ರತಾ ಸೌಲಭ್ಯದ ವಿಸ್ತರಣೆ.

ಸಮಗ್ರ ಆರೋಗ್ಯ-  ಯೋಗಕ್ಷೇಮಕ್ಕೆ ಆದ್ಯತೆ

O ಆರೋಗ್ಯ ಮತ್ತುಯೋಗಕ್ಷೇಮಕ್ಕೆ 2,23,846 ಕೋಟಿರೂ. ಹಂಚಿಕೆ (2020-21: 94,452 ಕೋಟಿ ರೂ.); ಶೇ 137ರಷ್ಟು ಏರಿಕೆ.

O ಕೋವಿಡ್ 19ರ ಲಸಿಕೆ ನೀಡುವಿಕೆ ಅಭಿಯಾನಕ್ಕೆ 35,000 ಕೋಟಿ ರೂ.

O 17,788 ಗ್ರಾಮೀಣ ಮತ್ತು 11,024 ನಗರ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳಿಗೆ ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯ ಮೂಲಕ ನೆರವು.

O 602 ಜಿಲ್ಲೆಗಳು ಹಾಗೂ 12 ಕೇಂದ್ರ ಸಂಸ್ಥೆಗಳಲ್ಲಿ ತುತರ್ುನಿಗಾ ಘಟಕಗಳ ಆರಂಭ.

O ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಸಾರ್ವಜನಿಕಆರೋಗ್ಯ ಪ್ರಯೋಗಾಲಯಗಳ ನಿಮರ್ಾಣ

o ಸಾರ್ವಜನಿಕ ಆರೋಗ್ಯ ಲ್ಯಾಬ್ಗಳನ್ನು ಸಂಪಕರ್ಿಸುವ ಮತ್ತು ಏಕೀಕೃತ ಆರೋಗ್ಯ ಮಾಹಿತಿಯನ್ನು ಒದಗಿಸುವ ದೃಷ್ಟಿಯಿಂದ ಆರೋಗ್ಯ ಪೋರ್ಟಲ್ ರಚನೆ.

O ಕರ್ನಾಟಕದಲ್ಲಿ 15 ತುತರ್ು ಶಸ್ತ್ರಚಿಕಿತ್ಸೆ ಕೇಂದ್ರ ಹಾಗೂ ಎರಡು ಮೊಬೈಲ್ ಆಸ್ಪತ್ರೆಯ ಆರಂಭ.

O ಆರೋಗ್ಯ ಸಂಬಂಧಿತ ಸಂಶೋಧನೆ ಮತ್ತು ಅಭಿವೃದ್ಧಿಗೋಸ್ಕರ ಆರೋಗ್ಯ ರಾಷ್ಟ್ರೀಯ ಸಂಸ್ಥೆಯ ಸ್ಥಾಪನೆ.

O ವಿಶ್ವಆರೋಗ್ಯ ಸಂಸ್ಥೆಯ ವತಿಯಿಂದ ಭಾರತದಲ್ಲಿ ಸಂಶೋಧನಾ ಸಂಸ್ಥೆ ಪ್ರಾರಂಭ

o ಸ್ವಚ್ಛ ಭಾರತ ಮಿಷನ್ಗಾಗಿ ಮುಂದಿನ 5 ವರ್ಷಗಳ ಅವಧಿಗೆ1.41 ಲಕ್ಷ ಕೋ ರೂ.ಮೀಸಲು

ಶುದ್ಧ ನೀರು ಮತ್ತುಮಿಷನ್ ಪೋಷಣ್-2

O 112 ಜಿಲ್ಲೆಗಳಲ್ಲಿ ಮಿಷನ್ ಪೋಷಣ್-2 ಯೋಜನೆಯ ಅನುಷ್ಠಾನ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 24,435 ಕೋ. ರೂ. ಶೇ 18 ಹೆಚ್ಚುವರಿ ಅನುದಾನ ಬಿಡುಗಡೆ.

O 4,378 ನಗರದ ಸ್ಥಳೀಯ ಪ್ರದೇಶದಎಲ್ಲ ಮನೆಗಳಿಗೆ ಕೊಳವೆ ನೀರಿನ ಸಂಪರ್ಕ ನೀಡುವ ಜಲ್ಜೀವನ್ ಯೋಜನೆ ಆರಂಭ.

O ದೇಶದಾದ್ಯಂತ ಎಲ್ಲ ಗ್ರಾಮೀಣ ಮನೆಗಳಿಗೆ 2024ರೊಳಗೆ 2.87 ಲಕ ್ಷಕೋಟಿ ವೆಚ್ಚದಲ್ಲಿ ಕೊಳವೆ ನೀರು ಪೂರೈಕೆ.

ಮೂಲ ಸೌಕರ್ಯಕ್ಕೆ ದಾಖಲೆ ಮಟ್ಟದಲ್ಲಿ ಬಂಡವಾಳ ವೆಚ್ಚ

O 2021-22 ರ ಸಾಲಿನಲ್ಲಿ ದೇಶದಾದ್ಯಂತ ಆಧುನಿಕ ಭಾರತದ ಮೂಲಸೌಕರ್ಯ ಹೆಚ್ಚಿಸಲು 5.54 ಲಕ್ಷ ಕೋಟಿ ರೂ. ಬಂಡವಾಳ ನೀಡಲಾಗಿದೆ (+34.5%).

O ರಾಜ್ಯಗಳು ಮತ್ತು ಸ್ವಾಯುತ್ತ ಮಂಡಳಿಗಳಿಗೆ ಬಂಡವಾಳ ವೆಚ್ಚವಾಗಿ 2 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ.

O 2,000 ಕೋಟಿ ರೂ. ವೆಚ್ಚದಲ್ಲಿ ಹಾಗೂ ಖಾಸಗೀ ಪಾಲುದಾರಿಕೆಯಲ್ಲಿ ಹೊಸದಾದ 7 ಬಂದರು ಮತ್ತು ಜಲಮಾರ್ಗ ಯೋಜನೆಗಳನ್ನು ಪ್ರಮುಖ ಬಂದರುಗಳಲ್ಲಿ ಆರಂಭಿಸಲಾಗುವುದು.

O ಒಳನಾಡು ಸಾರಿಗೆ, ಬಂದರುಕ್ಷೇತ್ರದಲ್ಲಿ ಹೊಸದಾಗಿ 1.5 ಲಕ್ಷಉದ್ಯೋಗ ಸೃಷ್ಟಿಸುವ ಸಂಕಲ್ಪ.

ಮೂಲ ಸೌಕರ್ಯ – ರಾಷ್ಟ್ರೀಯ ಹೆದ್ದಾರಿ

O ಎಕ್ಸ್ಪ್ರೆಸ್ ಹೆದ್ದಾರಿಗೆ 1,18,000ಕೋಟಿ ರೂ. ನಿಗದಿಪಡಿಸಲಾಗಿದೆ,

o ದೆಹಲಿ – ಮುಂಬೈ, ಬೆಂಗಳೂರು -ಚೆನ್ನೈಎಕ್ಸ್ಪ್ರೆಸ್ ಹೆದ್ದಾರಿ ನಿಮರ್ಾಣಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲನೆ.

O ದೆಹಲಿ – ಡೆಹರಾಡೂನ್ ಎಕನಾಮಿಕ್ ಕಾರಿಡಾರ್ ಪ್ರಸಕ್ತ ವರ್ಷದಲ್ಲಿ ಆರಂಭ.

O ಭಾರತ್ಮಾಲಾ ಯೋಜನೆಯಡಿ 3.3 ಲಕ್ಷ ಕೋಟಿ ರೂ. ವೆಚ್ಚದಲ್ಲಿ 13,000 ಕಿ.ಮೀ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. (ಈಗಾಗಲೇ 3,800 ಕಿ.ಮೀ ರಸ್ತೆ ಸಿದ್ಧ)

ಭಾರತೀಯ ರೈಲ್ವೆ: ಅಭಿವೃದ್ಧಿಯ ಇಂಜಿನ್

O ಮೇಕ್ ಇನ್ ಇಂಡಿಯಾ ಯೋಜನೆಯಡಿ 2030ರ ವೇಳೆಗೆ ಭವಿಷ್ಯದ ರೈಲ್ವೆಯನ್ನು ಸುಸಜ್ಜಿತಗೊಳಿಸುವುದು

o ಈಸ್ಟ್ಕೋಸ್ಟ್ ಕಾರಿಡಾರ್-ಖಾರಘ್ಪುರ್ದಿಂದ ವಿಜಯವಾಡ, ಈಸ್ಟ್ ವೆಸ್ಟ್ಕಾರಿಡಾರ್ದಿಂದ ಭೂಸಾವರ್ – ಖಾರಘ್ಪುರ್ದಿಂದ ಧಂಕುಣಿ, ನಾಥರ್್ ಸೌತ್ಕಾರಿಡಾರ್ ನಿಂದ ಇಟಾರ್ಸ್ – ವಿಜಯವಾಡ ಯೋಜನೆ ರೂಪಿಸಿ 2022ರೊಳಗೆ ಕಾಯರ್ಾರಂಭ.

O ಪ್ರಸಕ್ತ ವರ್ಷದಲ್ಲಿ ಭಾರತೀಯ ರೈಲ್ವೆಯಲ್ಲಿ ದಾಖಲೆಯ 1.07 ಲಕ್ಷ ಕೋಟಿರೂ ಬಂಡವಾಳ ಹೂಡಿಕೆ.

O 2021ರ ಅಂತ್ಯಕ್ಕೆ ಶೇ 72ರಷ್ಟು ಹಾಗೂ 2023ರ ಡಿಸೆಂಬರ್ ವೇಳೆಗೆ ಶೇ 100 ರಷ್ಟು ಎಲ್ಲ ಬ್ರಾಡ್ಗೇಜ್ ಮಾರ್ಗಗಳ ವಿದ್ಯುದ್ಧೀಕರಣ.

ಸರ್ವರಿಗೂ ನೈಸರ್ಗಿಕ ಅನಿಲ ಪೂರೈಕೆಯ ಪ್ರಯತ್ನ

 

O ಉಜ್ವಲ ಯೋಜನೆಯಡಿ ಇನ್ನೂ 1 ಕೋಟಿ ಮಹಿಳೆಯರಿಗೆ ಸಬ್ಸಿಡಿ ಸಹಿತ ಉಚಿತ ಅಡುಗೆ ಅನಿಲದ ಸಂಪರ್ಕ.

O ಮುಂದಿನ 3 ವರ್ಷದಲ್ಲಿ 100 ಜಿಲ್ಲೆಗಳಲ್ಲಿ ಅನಿಲ ವಿತರಣಾಜಾಲದ ವ್ಯವಸ್ಥೆ.

O ಜಮ್ಮು ಮತ್ತು ಕಾಶ್ಮೀರದಲ್ಲಿ ಅನಿಲ ಕೊಳವೆ ಮಾರ್ಗಯೋಜನೆಯ ಪ್ರಸ್ತಾಪ.

O ಸ್ವತಂತ್ರ ಅನಿಲ ಸಾಗಣೆ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿ.

ಇಂಧನ ಕ್ಷೇತ್ರ

ಗ್ರಾಹಕರಿಗೆತಮಗೆ ಅನುಕೂಲವಾಗುವ ಪವರ್ ಡಿಸ್ಟ್ರಿಬ್ಯೂಷನ್ ಸಂಸ್ಥೆಗಳನ್ನು  ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ.

ಹಸಿರು ಇಂಧನ ಮೂಲಗಳಿಂದ ಸಮಗ್ರ ಹೈಡ್ರೋಜನ್ ಎನರ್ಜಿ ಮಿಷನ್ ಸ್ಥಾಪನೆ.

ಪ್ರಸರಣಾ ವ್ಯವಸ್ಥೆಯು ಹೆಚ್ಚು ಗ್ರಾಹಕ ಸ್ನೇಹಿಯಾಗಲು ಮುಂದಿನ 5 ವರ್ಷಗಳಲ್ಲಿ 3,05,984ಕೋಟಿರೂ ವೆಚ್ಚದ ವಿದ್ಯುತ್ ವಿತರಣಾಕ್ಷೇತ್ರದಲ್ಲಿ ನೂತನ ಮೂಲ ಸೌಕರ್ಯ ನಿರ್ಮಾಣ.

ದೇಶಿಯ ಉತ್ಪಾದನೆಗೆ ಉತ್ತೇಜನ

ಆತ್ಮನಿರ್ಭರ ಭಾರತಕ್ಕೆ ಬೆಂಬಲ

O ಹತ್ತಿ ಮೇಲಿನ ಸೀಮಾ ಸುಂಕವನ್ನು ಶೂನ್ಯದಿಂದ ಶೇ10ಕ್ಕೆ ಹಾಗೂ ಕಚ್ಛಾ ರೇಷ್ಮೆ ಮತ್ತು ರೇಷ್ಮೆ ನೂಲಿನ ಮೇಲಿನ ಸುಂಕವನ್ನು ಶೇ 15ಕ್ಕೆ ಏರಿಕೆ.

O ಭಾರತದಲ್ಲಿತಯಾರಾಗುವ ಸಿದ್ಧ ಉಡುಪುಗಳು, ಚರ್ಮದ ಉತ್ಪನ್ನಗಳು ಮತ್ತುಕರ ಕುಶಲ ವಸ್ತುಗಳ ರಫ್ತಿಗೆ ಬೆಂಬಲ ನೀಡಲು ಈ ಮಾದರಿಯ ವಸ್ತುಗಳ ಆಮದಿನ ಮೇಲೆ ಸುಂಕ.

O ಸಿಂಥೆಟಿಕ್ ರತ್ನದಕಲ್ಲು ಮತ್ತು ಹರಳುಗಳು ಭಾರತದಲ್ಲೇ ಸಂಸ್ಕರಿಸಲು ಪ್ರೋತ್ಸಾಹ, ಸಿದ್ಧ ಪಡಿಸಿದ ಸಿಂಥೆಟಿಕ್ ರತ್ನ ಮತ್ತು ಹರಳಿನ ಆಮದಿನ ಮೇಲೆ ಸುಂಕ.

O ಟನಲ್ ಬೋರಿಂಗ್ ಮಿಷಿನ್ಗಳು ಮತ್ತು ಆಯ್ಕೆಯಾದ ಆಟೊಮೊಬೈಲ್ ಉಪಕರಣಗಳು, ವಾಹನಗಳ ಇಜ್ಞೈಷನ್ ವಯರ್ಗಳು, ಸುರಕ್ಷಿತ ಗ್ಲಾಸ್ಗಳು ಹಾಗೂ ಸಿಗ್ನಲ್ ಸಂಬಂಧಿತ ಪರಿಕರಗಳ ಮೇಲೆ ಆಮದು ಸುಂಕ.

O ಭಾರತದಲ್ಲೇ ಮೊಬೈಲ್ ಮತ್ತು ಮೌಲ್ಯವಧರ್ಿತ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಗೆ ಬೆಂಬಲವಾಗಿ ಮೊಬೈಲ್ನ ಕೆಲವು ಬಿಡಿ ಭಾಗಗಳ ಮೇಲಿನ ಶೂನ್ಯ ಆಮದು ಸುಂಕ ಹಿಂತೆಗೆತ.

O ಈ ಎಲ್ಲ ಕ್ರಮಗಳಿಂದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ.

O ಅಂತರರಾಷ್ಟ್ರೀಯ ಸ್ಪಧರ್ಾತ್ಮಕ ಮಟ್ಟಕ್ಕೆ ಭಾರತದ ಜವಳಿ ಉದ್ಯಮ: ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿವಿದೆಡೆ ಪಿಎಲ್ಐ ಯೋಜನೆಯ ಭಾಗವಾಗಿ 7 ಮೆಗಾ ಜವಳಿ ಪಾಕರ್್ಗಳ ಸ್ಥಾಪನೆ.

O ದೇಶೀಯ ಉತ್ಪಾದನೆ ಮತ್ತು ಭಾರತವನ್ನು ಗ್ಲೋಬಲ್ ವ್ಯಾಲ್ಯೂಚೈನ್ ವ್ಯವಸ್ಥೆಯಲ್ಲಿ ಭಾಗವಹಿಸುವಂತೆ ಮಾಡುವ ಅವಳಿ ಉದ್ದೇಶದಿಂದ ಆಮದು ಸುಂಕ ರಚನೆಯ ಕೂಲಂಕುಶ ಪರಿಶೀಲನೆ.

O ಉತ್ಪಾದನಾಉತ್ತೇಜನಕ್ಕೆ 1.97 ಲಕ್ಷ ಕೋಟಿ ರೂ. ಪ್ರೋತ್ಸಾಹಧನ.

O ಉತ್ಪಾದನಾ ಕ್ಷೇತ್ರವನ್ನು ಮತ್ತು ರಫ್ತನ್ನು ಉತ್ತೇಜಿಸಲು ಆಯ್ಕೆಯಾದ 13 ವಲಯಗಳಲ್ಲಿ ಮಾಡುವ ಹೆಚ್ಚುವರಿ ಉತ್ಪಾದನೆಗೆ ಶೇ 4 ರಿಂದಶೇ 6 ವರೆಗೆ ನಗದು ಪ್ರೋತ್ಸಾಹಧನ (ಸಮಗ್ರ 1.97 ಲಕ್ಷ ಕೋಟಿ ರೂ).

 

ಸರ್ವರಿಗೂ ತಲೆಯ ಮೇಲೊಂದು ಸೂರು

O ವಲಸೆ ಕಾಮರ್ಿಕರಿಗೆ ಮಹಾನಗರದಲ್ಲಿ ಉಳಿದುಕೊಳ್ಳಲು ಕೈಗೆಟುಕುವ ದರದಲ್ಲಿ ಬಾಡಿಗೆ ಮನೆಗಳ ಸಮುಚ್ಛಯ ನಿರ್ಮಾಣ.

  • Affordable Housing ನಿಮರ್ಾಣಕ್ಕೆ ನೀಡುವತೆರಿಗೆ ವಿನಾಯಿತಿಯನ್ನು 31 ಮಾಚರ್್ 2022ರವರೆಗೆ ವಿಸ್ತರಣೆ.
  • Affordable Housing ವಲಯಕ್ಕೆ ನೀಡಲಾಗುತ್ತಿದ್ದ ಸಾಲದ ಮೇಲಿನ ಬಡ್ಡಿಯಲ್ಲಿ 1.5 ಲಕ್ಷರೂ ವರೆಗೆ ಹೆಚ್ಚುವರಿ ಕಡಿತವನ್ನು 31 ಮಾಚರ್್ 2022ರವರೆಗೆ ವಿಸ್ತರಣೆ.

ತೆರಿಗೆ

O ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಬಲ ತುಂಬಲು 20,000 ಕೋಟಿರೂ. ಮರು ಬಂಡವಾಳ  ಪೂರೈಕೆ.

O ವಿಮೆ ವಲಯದಲ್ಲಿ ನೇರ ಬಂಡವಾಳ ಮಿತಿಯನ್ನು ಶೇ 49 ರಿಂದ ಶೇ 74ಕ್ಕೆ ಏರಿಕೆ.

O ಹಳೆ ವಾಹನಗಳ ಸ್ವಯಂ ಪ್ರೇರಿತ Paid-up Capital  ಇದರ ಅನ್ವಯ ವೈಯುಕ್ತಿಕ ವಾಹನಗಳಿಗೆ 20 ವರ್ಷಗಳ ಬಳಿಕ ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಕ್ಷಮತಾ ಪರೀಕ್ಷೆ.

O ಒಂದು ರಾಷ್ಟ್ರ ಒಂದು ಪಡಿತರ ಯೋಜನೆಯನ್ನು 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿ. 80 ಕೋಟಿ ಫಲಾನುಭವಿಗಳಿಗೆ ಪ್ರಯೋಜನ.

O ರಕ್ಷಣಾ ಕ್ಷೇತ್ರಕ್ಕೆ 4.78 ಲಕ್ಷ ಕೋಟಿರೂ ಮೀಸಲು. 1.35 ಲಕ್ಷ ಕೋ ರೂ ಬಂಡವಾಳ ವೆಚ್ಚಕ್ಕೆ  ವಿನಿಯೋಗ.

O ಉನ್ನತ ಶಿಕ್ಷಣಕ್ಕೆ 38,350 ಕೋಟಿ ರೂ, ಲೆಖ್ನಲ್ಲಿ ಕೇಂದ್ರ ವಿಶ್ವವಿದ್ಯಾನಿಲಯ ಸ್ಥಾಪನೆ.

O ಬಾಹ್ಯಾಕಾಶ ಇಲಾಖೆಗೆ 13,949 ಕೋಟಿರೂ ಮೀಸಲು (2020-21: 8,228 ಕೋ. ರೂ)

o ಎಂಎಸ್ಎಂಇ ವಲಯಗಳ ಉತ್ತೇಜನಕ್ಕೆ 15,700 ಕೋಟಿರೂ. ಅನುದಾನ (ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು).

O ಎಂಎಸ್ಎಂಇ ಸಾಲ, ತಕರಾರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಎನ್ಸಿಎಲ್ಟಿ ಚೌಕಟ್ಟನ್ನು ಬಲಪಡಿಸುವ, ಇ ನ್ಯಾಯಾಲಯ ವ್ಯವಸ್ಥೆ ಅನುಷ್ಠಾನಗೊಳಿಸುವ, ಋಣ ಪರಿಹಾರದ ಪಯರ್ಾಯ ವಿಧಾನಗಳನ್ನು ಅನುಸರಿಸುವ ಚೌಕಟ್ಟನ್ನು ಪರಿಚಯಿಸುವುದು. ಸಣ್ಣ ಕಂಪನಿಗೆ ಹೊಸ ವ್ಯಾಖ್ಯಾನ.

ತೆರಿಗೆ

O ಆದಾಯತೆರಿಗೆ ಮಿತಿಯಲ್ಲಿ ಯಥಾಸ್ಥಿತಿ.

O 75 ವರ್ಷದಾಟಿದ ಹಿರಿಯ ನಾಗರಿಕರಿಗೆ ಪಿಂಚಣಿ ಮತ್ತು ಬಡ್ಡಿ ಆದಾಯಕ್ಕೆ ಸಂಬಂಧಿಸಿ ಆದಾಯ ವಿವರ ಸಲ್ಲಿಕೆಯಿಂದ (ಐಟಿಆರ್) ವಿನಾಯಿತಿ. ತೆರಿಗೆಯನ್ನು (ಟಿಡಿಎಸ್) ಆಯಾ ಬ್ಯಾಂಕ್ಗಳೇ ಕಡಿತ ಮಾಡಲಿವೆ.

O ಸ್ಟಾರ್ಟ್ ಅಪ್ ಗಳಿಗೆ ನೀಡಲಾಗುತ್ತಿರುವ ಇನ್ಸೆಂಟೀವ್ಸ್ನ್ನು 31 ಮಾಚರ್್ 2022ರವರೆಗೆ  ವಿಸ್ತರಣೆ.

O ಸ್ಟಾರ್ಟ್ ಅಪ್ ವ್ಯವಸ್ಥೆ ಮತ್ತು ಎಂಎಸ್ಎಂಇಗಳನ್ನು ಬಲಪಡಿಸಲುಅಪರಾಧದಿಂದ ಮುಕ್ತವಾಗಿಸಲು ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ಎಲ್ಎಲ್ಪಿ) ಕಾಯಿದೆ 2008ಕ್ಕೆ ತಿದ್ದುಪಡಿ.

O ಒಬ್ಬ ವ್ಯಕ್ತಿಯ ಸಂಸ್ಥೆಗಳಿಗೆ Paid-up Capital ಮತ್ತು ವಹಿವಾಟಿನ ಮೇಲೆ ನಿರ್ಬಂಧತೆಗೆದುಹಾಕಲಾಗಿದೆ.

O ಚಿನ್ನದ ಮೇಲಿನ ಆಮದು ಸುಂಕ ಶೇ 12.5ರಿಂದ ಶೇ 7.5ಕ್ಕೆ ಇಳಿಕೆ.

O 2.5 ಲಕ್ಷಕ್ಕಿಂತ ಹೆಚ್ಚು ವಾಷರ್ಿಕ ಭವಿಷ್ಯ ನಿಧಿ ವಂತಿಕೆಗೆತೆರಿಗೆ.

O ರೈತರುಅನುಭವಿಸುತ್ತಿರುವ ನಷ್ಟವನ್ನುತಪ್ಪಿಸಲು ಶೇ 2.5 ಕೃಷಿ ಮೂಲ ಸೌಕರ್ಯ ಮತ್ತುಅಭಿವೃದ್ಧಿ ಸೆಸ್ಜಾರಿ. ಆದರೆಗ್ರಾಹಕರು ಪಾವತಿಸುವಲ್ಲಿಯಾವುದೇ ಬದಲಾವಣೆಇರುವುದಿಲ್ಲ.

ಆದಾಯತೆರಿಗೆ

O ತೆರಿಗೆ ಮೌಲ್ಯಮಾಪನದ ಮರು ನಿಷ್ಕರ್ಷೆಗೆ ಸಮಯದ ಮಿತಿಯನ್ನು ಈಗಿನ 6 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿದೆ.

O 50 ಲಕ್ಷರೂ ವರೆಗೆ ತೆರಿಗೆ ಅರ್ಹ ಆದಾಯಕ್ಕೆ ಸಂಬಂಧಿಸಿದ ಹಾಗೂ ಧೀರ್ಘಕಾಲ ಇತ್ಯರ್ಥವಾಗದೆ ಉಳಿದಿರುವ ತೆರಿಗೆ ವಿವಾದಗಳನ್ನು ಬಗೆಹರಿಸಲು ಮತ್ತುಕಡಿಮೆ  ಮಾಡಲು ಪ್ರತ್ಯೇಕ ಸಮಿತಿ ಸ್ಥಾಪನೆ.

O ಶೇ 95 ಭಾಗ ವಹಿವಾಟು ಡಿಜಿಟಲ್ ಆಗಿರುವ ಖಾತೆಗಳ ಟ್ಯಾಕ್ ಆಡಿಟ್ ಮಾಡಬೇಕಾದ  ಮಿತಿಯನ್ನು 1 ಕೋಟಿರೂ ನಿಂದ 5 ಕೋಟಿ ರೂ ಗೆ ಏರಿಕೆ.

O ಆದಾಯತೆರಿಗೆ ಮೇಲ್ಮನವಿ ನ್ಯಾಯಾಧಿಕರಣವನ್ನು ಡಿಜಿಟಲ್ ರೂಪದಲ್ಲಿ ಪ್ರಾರಂಭಿಸಲು ಪ್ರಸ್ತಾಪ.

ಸಂಪನ್ಮೂಲ ಸಂಗ್ರಹಣೆ

ಸರ್ಕಾರಿ ಸ್ವಾಮ್ಯ ದ BPCL, SCI, Air India, IDBI Bank ಮತ್ತು LIC IPOಗಳ ಮೂಲಕ 1.75  ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತ. ಮೂಲ ಸೌಕರ್ಯಕ್ಷೇತ್ರಕ್ಕೆ ಹಣಕಾಸು ಪೂರೈಕೆಗಾಗಿ Development Financial Institution(DFI) ಸ್ಥಾಪನೆಗೆ ಬಿಲ್ಲನ್ನು ಸಂಸತ್ತಿನಲ್ಲಿ ಮಂಡನೆ.  ‘

O DFIಗೆ 20,000 ಕೋ ರೂ ಬಂಡವಾಳ ಪೂರೈಕೆ, DFI ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಮೂಲ ಸೌಕರ್ಯ ಯೋಜನೆಗಳಿಗೆ 5 ಲಕ್ಷ ಕೋ ರೂ ಸಾಲ ನೀಡುವ ಪ್ರಸ್ತಾಪ.

O ವಿದೇಶಿ ಸಾಂಸ್ಥಿಕದಾರರಿಗೆ  DebtFinancing ನಲ್ಲಿ ಭಾಗವಹಿಸಲು ತಿದ್ದುಪಡಿ.

O ಸಾರ್ವಜನಿಕ ವಲಯದ ಸಂಸ್ಥೆಗಳ ಹೆಚ್ಚಿನ ಭೂಮಿಯನ್ನು (Real Estate) Monetize ಮಾಡುವ ಪ್ರಸ್ತಾಪ.

O ವಿಮಾನ ನಿಲ್ದಾಣಗಳ Operation ಮತ್ತು ನಿರ್ವಹಣೆ ಹಾಗೂ ಭಾರತೀಯರೈಲ್ವೆಯ Dedicated Freight Corridor ಗಳ Operation ಮತ್ತು ನಿರ್ವಹಣೆಯ ಪ್ರಸ್ತಾಪ.

Key words: Central Budget –Supplement- Agricultural Production- Minister -ST Somashekhar