ಸಿಸಿಬಿ ಪೊಲೀಸರಿಂದ 4 ಕೆ.ಜಿ ಚಿನ್ನ ಜಪ್ತಿ: ಇಬ್ಬರು ಆರೋಪಿಗಳು ಅಂದರ್…….

ಬೆಂಗಳೂರು,ಜನವರಿ,2,2021(www.justkannada.in):  ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿ 4 ಕೆ.ಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.jk-logo-justkannada-mysore

ಉತ್ತರ ಪ್ರದೇಶ ಮೂಲದ ಫಾಹಿಮ್ ಇಸ್ಲಾಂ, ಮರ್ಸಲಿಮ್ ಮೊಹಮ್ಮದ್ ಬಂಧಿತ ಆರೋಪಿಗಳು ಬಂಧಿತರ ಬಳಿ ಇದ್ದ ಎರಡುವರೆ ಕೋಟಿ ಮೌಲ್ಯದ 4 ಕೆ.ಜಿ ಚಿನ್ನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.CCB –police-arrest- tow –thief-2kg –gold- seized -bangalore

ಇಬ್ಬರು ಆರೋಪಿಗಳ ಬಂಧನದಿಂದ ಇದೀಗ 40 ಪ್ರಕರಣಗಳು ಬೆಳಕಿಗೆ ಬಂದಿದೆ. ಇನ್ನು ಬಂಧಿತ ಆರೋಪಿಗಳು ಉತ್ತರ ಪ್ರದೇಶದಿಂದ ಕಾರಿನಲ್ಲಿ ಬಂದು ಇಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಮನೆಗೆ ಕನ್ನ ಹಾಕಿ ದೋಚಿದ ನಂತರ ಅದೇ ಕಾರಿನಲ್ಲಿ ಆರೋಪಿಗಳು ಎಸ್ಕೇಪ್ ಆಗುತ್ತಿದ್ದರು. ಈ ನಡುವೆ ಬೆಂಗಳೂರು,ಬೆಳಗಾವಿ,ಗೋವಾದ ಪಣಜಿ, ಹೈದರಾಬಾದ್ ನಲ್ಲಿ ಕಳ್ಳತನ ಮಾಡಿದ್ದರು ಎನ್ನಲಾಗಿದೆ.

Key words: CCB –police-arrest- tow –thief-2kg –gold- seized -bangalore