ಸೆ.18 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಿಗದಿ.

Promotion

ನವದೆಹಲಿ, ಸೆಪ್ಟಂಬರ್,15,2023(www.justkannada.in):  ಮತ್ತೆ 15 ದಿನಗಳ  ತಮಿಳುನಾಡಿಗೆ ಪ್ರತಿದಿನ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯೂಆರ್​ಸಿ (CWRC) ನೀಡಿದ ಆದೇಶಕ್ಕೆ  ಒಪ್ಪದ ಹಿನ್ನೆಲೆ ಸೆಪ್ಟೆಂಬರ್ 18 ರಂದು ಕಾವೇರಿ ನೀರು ನಿರ್ವಹಣಾ ಪ್ರಧಾಕಾರದ ಸಭೆ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದಲ್ಲಿ ನಿರೀಕ್ಷೆಯಂತೆ ಮಳೆಯಾಗದೇ ಯಾವುದೇ ಜಲಾಶಗಳು ಭರ್ತಿಯಾಗಿಲ್ಲ. ಹೀಗಾಗಿ  ನೀರಿನ ಅಭಾವ ಇದ್ದು, ಹೀಗಿದ್ದರೂ ಸಹ  ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯೂ ಆರ್​ಸಿ ಆದೇಶ ಹೊರಡಿಸಿತ್ತು.

ಆದರೆ ಸಿಡಬ್ಲ್ಯೂಆರ್​ಸಿ ಆದೇಶಕ್ಕೆ ಕರ್ನಾಟಕದ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದೇಶಕ್ಕೆ ತಮಿಳುನಾಡು ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು . ಇನ್ನು ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ರಾಜ್ಯದಲ್ಲಿ ರೈತರು ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ನಡುವೆ ಇದೀಗ ಹಿನ್ನೆಲೆ ಸೆಪ್ಟೆಂಬರ್ 18 ರಂದು ಕಾವೇರಿ ನೀರು ನಿರ್ವಹಣಾ ಪ್ರಧಾಕಾರದ  ಸಭೆ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Cauvery Water -Management -Authority -meeting -scheduled -September 18.