ಬಂಡವಾಳ ಹೂಡಿಕೆದಾರರ ಸಮಾವೇಶ: ಕರ್ನಾಟಕದ ಸಾಧನೆ, ಪ್ರಗತಿ ಕೊಂಡಾಡಿದ ಪ್ರಧಾನಿ ಮೋದಿ.

ಬೆಂಗಳೂರು,ನವೆಂಬರ್,2,2022(www.justkannada.in): ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಸಾಧನೆ ಪ್ರಗತಿಯನ್ನ ಕೊಂಡಾಡಿದರು.

ಸಮಾವೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಕನ್ನಡಿಗರು ಕನ್ನಡ ಭಾಷೆಯನ್ನೇ ಜೀವಾಳವಾಗಿಸಿಕೊಂಡಿದ್ದಾರೆ. ಇದು ಶ್ರೀಮಂತ ಸಂಸ್ಕೃತಿ ಹೊಂದಿರುವ ನಾಡು. ಕರ್ನಾಟಕದ ಮಣ್ಣು ಎಲ್ಲದಕ್ಕಿಂತ ಸುಂದರ.  ಪ್ರತಿಭೆ ತಂತ್ರಜ್ಞಾನದ ಬ್ರಾಂಡ್ ಹೊಂದಿರುವ ಬೆಂಗಳೂರು.  ಮೃದು ಭಾಷೆ ಕನ್ನಡ. ಕರ್ನಾಟಕ ಅಪಾರ ಪ್ರಾಕೃತಿಕ ಸಂಪತ್ತು ಹೊಂದಿರುವ ರಾಜ್ಯ. ಕರ್ನಾಟಕದಲ್ಲಿ ತಂತ್ರಜ್ಞಾನದ ಜೊತೆ ಸಂಸ್ಕೃತಿಯೂ ಇದೆ. ಕರ್ನಾಟಕದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಳವಾಗುತ್ತಿದೆ. ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಸಾಕಷ್ಟು ಮುಂಚೂಣಿಯಲ್ಲಿದೆ ಎಂದು ನುಡಿದರು.

ಭಾರತದ  ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ಅಪಾರ. ಕರ್ನಾಟಕ ಇಡೀ ಜಗತ್ತನ್ನೇ ಸೆಳೆದ ರಾಜ್ಯ. ಕರ್ನಾಟಕ ಎಲ್ಲದರಲ್ಲೂ ಮುನ್ನಡೆಯುತ್ತಿದೆ. ಹೂಡಿಕೆಯಿಂದಾಗಿ ಉದ್ಯೋಗ ಸೃಷ್ಠಿಯಾಗುತ್ತದೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಶಕ್ತಿ ಇದೆ.  ಕೇಂದ್ರ ರಾಜ್ಯದಲ್ಲಿ ಒಂದೇ ಪಕ್ಷ ಇರುವುದರಿಂದ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.

ಹಾಗೆಯೇ ಭಾರತದ ಅರ್ಥ ವ್ಯವಸ್ಥೆ ದಿನೇ ದಿನೇ ಸುಧಾರಿಸುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳವಾಗಿದೆ.  ಮೆಟ್ರೋ ರೈಲು ವ್ಯವಸ್ಥೆಯನ್ನ ವಿಸ್ತರಿಸಲಾಗಿದೆ. ದೇಶದಲ್ಲಿ ಏರ್ ಪೋರ್ಟ್ ಸಂಖ್ಯೆ ಹೆಚ್ಚಳವಾಗಿದೆ. ಉದ್ಯಮಿಗಳು ಪಿಎಂ ಗತಿಶಕ್ತಿ ಯೋಜನೆ ಕಡೆಯೂ ನೋಡಬೇಕು. ಗತಿ ಶಕ್ತಿ ಯೋಜನೆಯೂ ದೇಶದ ಮೂಲಕ ಸೌಕರ್ಯಗಳ ಪ್ಲಾನ್ ಆಗಿದೆ.  ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಲಾಗುತ್ತಿದೆ. ದೇಶದಲ್ಲಿ ಡಿಜಿಟಲ್ , ಬ್ಯಾಂಕಿಂಗ್ ಸುಧಾರಣೆಯಾಗುತ್ತಿದೆ.  ಭಾರತದ ತಾಕತ್ತು ಈಗ ಜಗತ್ತಿಗೆ ಗೊತ್ತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Key words: Capital-Investors- Conference- PM Modi – Karnataka.

ENGLISH SUMMARY…

Investors meet: PM Modi appreciates Karnataka’s achievements, progress
Bengaluru, November 2, 2022 (www.jsutkannada.in): Prime Minister Narendra Modi virtually participated in the inauguration of the Investors Meet, held at the Bengaluru Palace grounds today. He lauded the achievements and progress made by the Karnataka Government.
In his video conference address, the Prime Minister Modi informed that Kannadigas have made Kannada language as their life and breath. “Karnataka is a land having a rich culture and history. The soil of Karnataka is most beautiful. Bengaluru is a brand with a pool of talent and technology. Kannada is a very sweet language and Karnataka is a land rich of natural resources. Along with culture, Karnataka also has technology, production is increasing in the state. Karnataka is in the forefront in technology,” he said.
“The contribution of Karnataka State for the development of the country is immense. Karnataka is a state which has attracted the entire world and is leading in many sectors. Employment opportunities are created because of increasing investments. There is a double engine government in Karnataka. The state is progressing as both the State and Union Governments are from the same party,” he observed.
Further he said, “the Indian economy is progressing day-by-day. The investment rate in defence sector is increasing. Metro rail reach has been extended, number of airports have been increased. The industrialists should also notice the PM Gatishakti program too. It is an infrastructure plan of the country. The infrastructure facilities of the country is being developed. The digital banking system of the country is being improvised. The entire world has come to know about the strengths of India today,” he said.
Keywords: PM Narendra Modi/ Invest Karnataka/ Virtual conference