ದೇಶದೆಲ್ಲೆಡೆ 10ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು: ಕೇಂದ್ರ ಗೃಹಸಚಿವಾಲಯ ಆದೇಶ

kannada t-shirts

ಬೆಂಗಳೂರು, ಮೇ 06, 2020 (www.justkannada.in): ಈಶಾನ್ಯ ದೆಹಲಿ ಪ್ರದೇಶವೊಂದನ್ನು ಬಿಟ್ಟು, ದೇಶದೆಲ್ಲೆಡೆ 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

ಈ ಸಂಬಂಧ ಕೇಂದ್ರ ಗೃಹಸಚಿವಾಲಯ(MHRD) ಆದೇಶವನ್ನು ಹೊರಡಿಸಿದೆ. ಈ ಆದೇಶ ಸಿಬಿಎಸ್ ಇಯ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಅನ್ವಯವಾಗಲಿದೆ. ಆದರೆ, ಕರ್ನಾಟಕದ ಎಸ್‌ಎಸ್‌ಎಲ್ ಸಿ ಪರೀಕ್ಷೆಗೂ ಇದಕ್ಕೂ ಸಂಬಂಧವಿಲ್ಲ.

ಕರ್ನಾಟಕದ ರಾಜ್ಯ ಪಠ್ಯಕ್ರಮದಂತೆ ನಡೆಯುವ ಪರೀಕ್ಷೆ ಬಗ್ಗೆ ಜೂನ್ ತಿಂಗಳಿನಲ್ಲಿ ತಿಳಿಸಲಾಗುವುದು ಎಂದು ಕರ್ನಾಟಕದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಟ್ವಿಟ್ಟರಲ್ಲಿ ಈ ಬಗ್ಗೆ ಮೇ 5ರಂದು ತಿಳಿಸಿರುವ MHRD, ದೇಶದೆಲ್ಲೆಡೆ ಪರೀಕ್ಷೆ ರದ್ದುಪಡಿಸಲಾಗಿದೆ, ದೆಹಲಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆಗಾಗಿ 10ದಿನಗಳ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗುತ್ತದೆ ಎನ್ನಲಾಗಿದೆ.

 

website developers in mysore