ಸಿಎಂ ಕಚೇರಿಯಿಂದ ನನಗೆ ಕರೆ ಬಂದಿದೆ: ಡಿಸಿಎಂ ವಿಚಾರದಲ್ಲಿ ನಾನು ಪಕ್ಷದ ನಿರ್ಧಾರಕ್ಕೆ ಬದ್ಧ- ಗೋವಿಂದ ಕಾರಜೋಳ.

kannada t-shirts

ಬೆಂಗಳೂರು,ಆಗಸ್ಟ್,4.2021(www.justkannada.in):  ರಾಜ್ಯಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದ್ದು ಕೆಲಹೊತ್ತಿನಲ್ಲಿ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಲಿದೆ. ಈ ಮಧ್ಯೆ ಪ್ರಮಾಣ ವಚನ ಸ್ವೀಕರಿಸಿಲು ನನಗೂ ಸಿಎಂ ಕಚೇರಿಯಿಂದ ಕರೆ ಬಂದಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೋವಿಂದ ಕಾರಜೋಳ, ಡಿಸಿಎಂ ವಿಚಾರದಲ್ಲಿ ನಾನು ಪಕ್ಷದ ನಿರ್ಧಾರಕ್ಕೆ ಬದ್ಧ. ಜೊತೆಯಲ್ಲಿದ್ದು ಮಾರ್ಗದರ್ಶನ ಮಾಢುವ ಕೆಲಸ ಮಾಡುತ್ತೇನೆ. ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ ಎಂದರು.

ಇಂದು  ಬೆಳಿಗ್ಗೆ 11 ರಿಂದ 11.30ರೊಳಗೆ ರಾಜಭವನದಿಂದಲೇ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಲಿದೆ. ನೂತನ ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ. ಗೋವಿಂದ ಕಾರಜೋಳ, ಎಸ್.ಟಿ ಸೋಮಶೇಖರ್,ಬಿಸಿ ಪಾಟೀಲ್, ಉಮೇಶ್ ಕತ್ತಿ, ಪೂರ್ಣಿಮಾ ಶ್ರೀನಿವಾಸ್,ಅರಗ ಜ್ಞಾನೇಂದ್ರ, ಕೆ.ಎಸ್ ಈಶ್ವರಪ್ಪ, ಅಶ್ವಥ್ ನಾರಾಯಣ್, ಶ್ರೀರಾಮುಲು, ಡಾ,ಕೆ.ಸುಧಾಕರ್, ಎಸ್ ಅಂಗಾರ, ಭೈರತಿ ಬಸವರಾಜ್, ಅರವಿಂದ ಲಿಂಬಾವಳಿ, ಆನಂದ್ ಸಿಂಗ್.ವಿ.ಸೋಮಣ್ಣ, ಗೋಪಾಲಯ್ಯ, ನಾರಾಯಣಗೌಡ, ಮುನಿರತ್ನ, ಪ್ರಭು ಚೌಹಾಣ್, ಹಾಲಪ್ಪ ಆಚಾರ್ ಸಂಭಾವ್ಯ ಸಚಿವವರ ಪಟ್ಟಿಯಲ್ಲಿದ್ದಾರೆ.

Key words: call -CM’s office -decision – DCM- Govinda Karajola-minister position

website developers in mysore